ತಿರುವನಂತಪುರ: ಸರ್ಕಾರಿ ಸೇವೆಯಲ್ಲಿರುವ ಎಲ್ಲ ಗುತ್ತಿಗೆ ನೌಕರರಿಗೆ ಆರು ತಿಂಗಳ ಹೆರಿಗೆ ರಜೆ ಘೋಶಿಸಲಾಗಿದೆ. ಪೂರ್ಣ ವೇತನದೊಂದಿಗೆ 180 ದಿನಗಳ ಹೆರಿಗೆ ರಜೆ ನೀಡಲು ಹಣಕಾಸು ಸಚಿವಾಲಯ ಆದೇಶಿಸಿದೆ. ಹಿಂದೆ, ಒಂದು ವರ್ಷಕ್ಕೂ ಹೆಚ್ಚು ಕಾಲಗಳಿಂದ ಗುತ್ತಿಗೆ ಕೆಲಸದಲ್ಲಿದ್ದವರಿಗೆ ಮಾತ್ರ ಮಾತೃತ್ವ ರಜೆ ನೀಡಲಾಗುತ್ತಿತ್ತು.
ಫೆಬ್ರವರಿ 27, 2018 ರಿಂದ ಈ ಆದೇಶವು ಅನ್ವಯವಾಗಲಿದೆ. ಗುತ್ತಿಗೆ ನೌಕರಿಯು 180 ದಿನಗಳ ಮೊದಲು ಮುಕ್ತಾಯಗೊಂಡರೆ, ಅಲ್ಲಿಯವರೆಗೆ ರಜೆ ಮುಂದುವರಿಯುತ್ತದೆ.
ವೈದ್ಯಕೀಯ ಅಧಿಕಾರಿ ನಿಗದಿಪಡಿಸಿದ ದಿನಾಂಕಕ್ಕಿಂತ ಮೂರು ವಾರಗಳ ಮೊದಲು ರಜೆ ಲಭ್ಯವಾಗಲಿದೆ. ಗರ್ಭಪಾತ್ರ ಶಸ್ತ್ರಕ್ರೀಯೆ ಸಂಬಂಧಿಯಾಗಿ ಗುತ್ತಿಗೆ ಅವಧಿಯನ್ನು ಲೆಕ್ಕಿಸದೆ ಗುತ್ತಿಗೆ ಸಿಬ್ಬಂದಿಗಳಿಗೆ 6 ವಾರಗಳ ರಜೆ ನೀಡಲಾಗುತ್ತದೆ. ಗುತ್ತಿಗೆ ನೌಕರರ ಹಲವು ವರ್ಷಗಳ ಬೇಡಿಕೆಯ ಪರವಾಗಿ ನ್ಯಾಯಾಲಯ ಆದೇಶ ನೀಡಿದ್ದರ ಬೆನ್ನಿಗೆ ಸರ್ಕಾರದ ಆದೇಶ ಹೊರಬಿದ್ದಿದೆ.