ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಯುವ ತಾಲೂಕು ಮಟ್ಟದ ಆನ್ ಲೈನ್ ದೂರುಪರಿಹಾರ ಅದಾಲತ್ ಅಂಗವಾಗಿ ಮಂಜೇಶ್ವರ ತಾಲೂಕು ಅದಾಲತ್ ಜ.19ರಂದು ಮಧ್ಯಾಹ್ನ 2 ಗಂಟೆಗೆ, ಜ.28ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಕಾಸರಗೋಡು ತಾಲೂಕು ಅದಾಲತ್ ಗೆ ಜ. 10ರ ವರೆಗೆ, ಮಂಜೇಶ್ವರ ತಾಲೂಕು ಅದಾಲತ್ ಗೆ ಜ.18 ವರೆಗೆ ದೂರುಗಳನ್ನು ಸ್ವೀಕರಿಸಲಾಗುವುದು. ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಸ್ಥಳೀಯಾಡಳಿತ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಅದಾಲತ್ ಗಳಲ್ಲಿ ಪರಿಶೀಲಿಸಲಾಗುವುದು. ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಯಿಂದ ಚಿಕಿತ್ಸಾ ಸಹಾಯ, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಂಬಂಧ ದೂರುಗಳನ್ನು ಈ ಅದಾಲತ್ ಗಳಲ್ಲಿ ಪರಿಶೀಲಿಸುವುದಿಲ್ಲ.
www.editsrict.kerala.gov.in ಮೂಲಕ ಆನ್ ಲೈನ್ ರೂಪದಲ್ಲಿ, ಅಕ್ಷಯ ಕೇಂದ್ರಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು. ತಾಲೂಕು ಕಚೇರಿಗಳಲ್ಲೂ, ಸಂಬಂಧಪಟ್ಟ ಗ್ರಾಮ ಕಚೇರಿಗಳಲ್ಲೂ ನೇರವಾಗಿ ದುರುಗಳನ್ನು ಸಲ್ಲಿಸಬಹುದು. ಆನ್ ಲೈನ್ ಆಗಿ ಅದಾಲತ್ ನಲ್ಲಿ ಸಲ್ಲಿಸಲಾಗುವ ಎಲ್ಲ ದೂರುಗಳನ್ನು ಸಂಬಂಧಪಟ್ಟ ತಾಲೂಕು ಕಚೇರಿಗೂ ಕಳುಹಿಸಬೇಕು.