HEALTH TIPS

ಕೋವಿಡ್ 19 ಪ್ರತಿರೋಧ- ಅನ್ಲೋಕ್ 5.0 ಸಡಿಲಿಕೆ ವೇಳೆ ಮಂಡಿಸುವ ಸಲಹೆಗಳು: ಕೇರಳ ಅಂಟುರೋಗ ಹರಡುವಿಕೆ ನಿಯಂತ್ರಣ ಕಾಯಿದೆ ಕಾಸರಗೋಡು ಜಿಲ್ಲೆಯಲ್ಲಿ ಕಡ್ಡಾಯಗೊಳಿಸಿ ಸೂಚನೆ

   

       ಕಾಸರಗೋಡು: ಕೋವಿಡ್ 19 ಪ್ರತಿರೋಧ ಅನ್ಲೋಕ್ 5.0 ಸಡಿಲಿಕೆ ವೇಳೆ ಮಂಡಿಸುವ ಸಲಹೆಗಳು ಹೀಗಿವೆ. ಕೇರಳ ಅಂಟುರೋಗ ಹರಡುವಿಕೆ ನಿಯಂತ್ರಣ ಕಾಯಿದೆ ಕಾಸರಗೋಡು ಜಿಲ್ಲೆಯಲ್ಲಿ ಕಡ್ಡಾಯಗೊಳಿಸಬೇಕು ಎಂಬುದು ಇಲ್ಲಿನ ಪ್ರಧಾನ ವಿಷಯವಾಗಿದೆ. 

1. ಮಹೋತ್ಸವ, ಸಾರ್ವಜನಿಕ ಸಮಾರಂಭಗಳು, ಕಲಾಕಾರ್ಯಕ್ರಮಗಳು, ಪ್ರವಾಸಿ ತಾಣಗಳು ಇತ್ಯಾದಿಗಳಲ್ಲಿ ಕಡ್ಡಾಯವಾಗಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ನಡೆಸುವುದರ ಜೊತೆಗೆ ಸ್ಥಲೀಯಾಡಳಿತೆ ಸಂಸ್ಥೆಗಳ ಮತ್ತು ಪೆÇಲೀಸ್ ಸ್ಟೇಷನ್ ಹೌಸ್ ಆಫೀಸರ್ ಅವರ ಮುಂಗಡ ಅನುಮತಿ ಪಡೆದಿರಬೇಕು. ಸೆಕ್ಟರಲ್ ಮೆಜಿಸ್ಟ್ರೇಟರರ ಅಥವಾ ಮಾಸ್ಟರ್ ಯೋಜನೆಯ ಶಿಕ್ಷಕರ ಸಮಕ್ಷ ಖಚಿತಪಡಿಸಬೇಕು. 

2. ಕಳಿಯಾಟ ಮಹೋತ್ಸವ ಸಹಿತ ಕೇಂದ್ರಗಳಲ್ಲಿ ಅನೇಕ ಜನಾಂಗದವರು ಈ ಬಾರಿ ದೈವಕೋಲಗಳನ್ನು ನಡೆಸಿಲ್ಲ. ಕೆಲವೆಡೆ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತಗೊಂಡಿವೆ. ಇತರ ಆರಾಧನಾಲಯಗಳಿಗೆ ಇದು ಅನುಸರಣೀಯವಾಗಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಸಂಘಟನೆಗಳ ಸಭೆ ನಡೆಸಬೇಕು. 

3. ಈಜು ಕೆರೆಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳ ಪಾಲನೆ ಖಚಿತಪಡಿಸಬೇಕು. ವಾರ್ಡ್ ಮಟ್ಟದ ಜಾಗೃತಾ ಸಮಿತಿಗಳು ಈ ಜವಾಬ್ದಾರಿ ಹೊರಬೇಕು. 

4. ಸಾರ್ವಜನಿಕ ಸಮಾರಂಭಗಳಲ್ಲಿ ಒಳಾಂಗಣ ಕಾರ್ಯಕ್ರಮಗಳಲ್ಲಿ 100 ಮಂದಿ, ಹೊರಾಂಗಣದಲ್ಲಿ 200 ಮಂದಿ ಮಾತ್ರ ಭಾಗವಹಿಸುವ ಖಚಿತತೆ ಮೂಡಿಸಬೇಕು. ಇದಕ್ಕೆ ಪೂರಕವಾಗಿ ಪಾಸ್ ಸೌಲಭ್ಯ ಏರ್ಪಡಿಸಬೇಕು. ಸಂಘಟನೆಗಳು ಈ ನಿಟ್ಟಿನಲ್ಲಿ ಸಹಕರಿಸುವಂತೆ ವಿನಂತಿ ಮಾಡಬೇಕು. ಪಾಸ್ ಮಂಜೂರಾತಿಗೆ ಅಂಗೀಕೃತ ಸೌಲಭ್ಯವಿದ್ದರೆ ಒಳಿತು. 

5. ಸರಕಾರಿ ಕಾರ್ಯಕ್ರಮಗಳಲ್ಲಿ ಅನುಮತಿಯಿರುವ ಗಣನೆಗಿಂತ ಹೆಚ್ಚುವರಿ ಸಂಖ್ಯೆಯಲ್ಲಿ ಜನ ಸೇರುವುದಿಲ್ಲ ಎಂಬ ಖಚಿತತೆಯನ್ನು ಹೊಣೆಗಾರಿಕೆಯಿರುವ ಇಲಾಖೆಗಳ ಮುಖ್ಯಸ್ಥರು ಮೂಡಿಸಬೇಕು. 

6. ವಿವಾಹ, ಮರಣ ಸಹಿತ ಸಮಾರಂಭಗಳಲ್ಲಿ ಜನ ಗುಂಪು ಸೇರಕೂಡದು. 

7. ಬಾಂಕ್ ಗಳಲ್ಲಿ ಮಾಸ್ಕ್ ಧರಿಸದೇ ಆಗಮಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. 

8. ಅಂಗಡಿ, ಹೋಟೆಲ್ ಸಹಿತ ಸಂಸ್ಥೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್,, ಗ್ಲೌಸ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿಗಳ ತಪಾಸಣೆಯನ್ನು ಮಾಸ್ಟರ್ ಯೋಜನೆಯ ಶಿಕ್ಷಕರು, ಪೆÇಲೀಸರು ಯಾ ಸಮವಸ್ತ್ರಧಾರಿ ಪಡೆ ನಡೆಸಬೇಕು. 

9. ಅತ್ಯುತ್ತಮ ಕೋವಿಡ್ ಪ್ರತಿರೋಧ ಜನಜಾಗೃತಿ ಮೂಡಿಸುವ ವಾರ್ಡ್ ಮಟ್ಟದ ಜಾಗೃತಿ ಸಮಿತಿಗೆ ಕೋವಿಡ್ ಪದಕ ನೀಡಬೇಕು. 

7. ಶಾಲಾ-ಕಾಲೇಜು ಸಹಿತ ಶಿಕ್ಷಣಾಲಯಗಳ ಹಾಸ್ಟೆಲ್ ಗಳಲ್ಲಿ ಕೋವಿಡ್ ಪ್ರತಿರೋಧಕ್ಕೆ ಆಯಾ ಸಂಸ್ಥೆಗಳ ಮುಖ್ಯಸ್ಥರು ಕಟ್ಟುನಿಟ್ಟಿನ ಆದೇಶ ಪ್ರಕಟಿಸಬೇಕು. ಆಂಟಿಜೆನ್ ಟೆಸ್ಟ್ ನಡೆಸಬೇಕು. 

8. ಸಿನಿಮಾ ಥಿಯೇಟರ್ ಗಳಲ್ಲಿ ಸೆಕ್ಟರಲ್ ಮೆಜಿಸ್ಟ್ರೇಟ್ ರು ತಪಾಸಣೆ ನಡೆಸಬೇಕು. ಈ ಸಂಸ್ಥೆಗಳ ಮಾಲೀಕರು ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸುವ ಸಂಬಂಧ ಸೂಚನೆಗಳನ್ನು ಬೆಳ್ಳಿತೆರೆಯಲ್ಲಿ ಪ್ರದರ್ಶಿಸಬೇಕು.

9. ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಯುವಜನ, ಸ್ವಯಂಸದೇವಾ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಸಭೆ ನಡೆಸುವುದು ಒಳಿತು. 

10. ಮಾಧ್ಯಮಗಳಲ್ಲಿ ಜನಜಾಗೃತಿ ಪ್ರತಿಯೊಬ್ಬರಿಗೂ ಲಸಿಕೆ ಲಭಿಸುವ ವರೆಗೆ ಮುಂದುವರಿಯಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries