ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಲಸಿಕೆ ವಿತರಣೆಯ ದಿನಾಂಕವನ್ನು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೋ-ವಿನ್ ಸಾಫ್ಟ್ ವೇರ್ ನಿರ್ವಹಣೆಗೆ ಸಂಬಂಧಿಸಿದಂತೆ ಜ.10 ರಂದು ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೋವಿಡ್-19 ಲಸಿಕೆ ಅಡ್ಮಿನಿಸ್ಟ್ರೇಷನ್ ನ ರಾಷ್ಟ್ರೀಯ ತಜ್ಞರ ತಂಡದ ಸದಸ್ಯ, ಅಔಗಿIಆ-19 ಅನ್ನು ಎದುರಿಸಲು ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಕುರಿತು ಸಶಕ್ತ ಗುಂಪಿನ ಅಧ್ಯಕ್ಷರಾದ ರಾಮ್ ಸೇವಕ್ ಶರ್ಮಾ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೀಯ ಆರೋಗ್ಯ ಮಿಷನ್ ನ ನಿರ್ದೇಶಕರು, ರಾಜ್ಯ ಇಮ್ಯುನೈಸೇಷನ್ ಅಧಿಕಾರಿಗಳು, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಸಿಕೆಯ ಡ್ರೈ ರನ್ ನಿಂದ ಸಂಗ್ರಹಿಸಿರುವ ಮಾಹಿತಿ ಹಾಗೂ ಕೋವಿನ್ ಸಾಫ್ಟ್ ವೇರ್ ಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.ಕೆಲವು ರಾಜ್ಯಗಳು ಕನೆಕ್ಟಿವಿಟಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದೇ ವೇಳೆ ನಕಲಿ ವ್ಯಕ್ತಿಗಳ ತಡೆಯುವುದು, ಫಲಾನುಭವಿಗಳನ್ನು ಸೂಕ್ತವಾಗಿ ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ ಎಂದು ರಾಮ್ ಸೇವಕ್ ಶರ್ಮಾ ತಿಳಿಸಿದ್ದಾರೆ.
ಆಧಾರ್ ಬಳಕೆ ಮಾಡಿ ಲಸಿಕೆ ವಿತರಣೆ ಮಾಡಿದರೆ ನಕಲಿ ಫಲಾನುಭವಿಗಳನ್ನು ಸುಲಭವಾಗಿ ಹೊರಗಿಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.