ಮಾಸ್ಕೋ: ಲ್ಯಾಟಿನ್ ಅಮೆರಿಕನ್ ದೇಶಕ್ಕೆ ಕೋವಾಕ್ಸಿನ್ ಹೆಸರಿನ ಕೋವಿಡ್ 19 ಲಸಿಕೆಯನ್ನು ಪೂರೈಸುವ ಸಂಬಂಧ ಬ್ರೆಜಿಲ್ ಸಂಸ್ಥೆಯ ಪ್ರೆಸಿಸಾ ಮೆಡಿಕಮೆಂಟೋಸ್‍ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಎಂದು ಭಾರತೀಯ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ತಿಳಿಸಿದೆ.
ಭಾರತೀಯ ಲಸಿಕೆ ಅಭಿವೃದ್ಧಿ ಸಂಸ್ಥೆಯ ಪ್ರಕಟಣೆ ಪ್ರಕಾರ, ತಿಂಗಳ ಆರಂಭದಲ್ಲಿ ಪ್ರಿಸಿಸಾ ಮೆಡಿಕಮೆಂಟೋಸ್‍ನ ಪ್ರತಿನಿಧಿಗಳು ಭಾರತ್ ಬಯೋಟೆಕ್‍ನ ಸೌಲಭ್ಯಗಳಿಗೆ ಭೇಟಿ ನೀಡಿದ್ದು, ಎರಡು ಕಂಪನಿಗಳು ಕೋವಾಕ್ಸಿನ್ ಸಂಗ್ರಹಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.
ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ, ಭಾರತ್ ಬಯೋಟೆಕ್‍ನಲ್ಲಿ ಅಭಿವೃದ್ಧಿಪಡಿಸಿದ ಎಲ್ಲಾ ಲಸಿಕೆಗಳಿಗೆ ಅಗತ್ಯವಿರುವ ಜನಸಂಖ್ಯೆಗೆ ಜಾಗತಿಕ ಪ್ರವೇಶ ಕಲ್ಪಿಸುವುದು ನಮ್ಮ ಗುರಿ. ಕೋವಾಕ್ಸಿನ್ ಅನೇಕ ವೈರಲ್ ಪೆÇ್ರೀಟೀನ್‍ಗಳಿಗೆ ದೃಢ ರೋಗನಿರೋಧಕ ಪ್ರತಿಕ್ರಿಯೆಯನ್ನು ಖಚಿತಪಡಿಸಿದೆ ಎಂದಿದ್ದಾರೆ.