ನವದೆಹಲಿ: ಕೋವಿಡ್-19 ಲಸಿಕೆ ಪ್ರಯೋಗಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ವೈದ್ಯರು ಮತ್ತು ವಿಜ್ಞಾನಿಗಳ ರಾಷ್ಟ್ರೀಯ ಸಂಘವು ಒತ್ತಾಯಿಸಿದೆ.
ಮೂರು ಹಂತದ ಪ್ರಯೋಗದ ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ಪರಿಶೀಲಿಸಬೇಕು, ಎರಡು ಲಸಿಕೆಗಳು ದೇಶದಲ್ಲಿ ಲಭ್ಯವಿರುವಾಗ ಮೂರನೇ ಹಂತದ ಪ್ರಯೋಗ ಪೂರ್ಣಗೊಂಡಾಗ ತುರ್ತು ಬಳಕೆಯ ನಿರ್ಧಾರವನ್ನು ಪುನರ್ ಪರಿಶೀಲಿಸಬಹುದು ಎಂದು ಪ್ರಗತಿಪರ ವೈದ್ಯರು ಮತ್ತು ವಿಜ್ಞಾನಿಗಳ ವೇದಿಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಸ್ವಯಂ ಪ್ರೇರಿತರಾಗಿ ಅಥವಾ ದೊಡ್ಡ ಸಮುದಾಯಕ್ಕಾಗಿ ಲಸಿಕೆ ಆಯ್ಕೆಗೆ ಸಂಬಂಧಿಸಿದ ಮಾಹಿತಿಯು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ತಿಳಿಯುವಂತಾಗಿ, ಲಸಿಕೆ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದೆ
ಯಾವುದೇ ಭಯ, ಒತ್ತಡ ಅಥವಾ ಇತರ ವ್ಯತಿರಿಕ್ತ ಪರಿಣಾಮಗಳಿಲ್ಲದ ಆಯ್ಕೆಯನ್ನು ಎಲ್ಲಾ ಆರೋಗ್ಯ ಕಾರ್ಯಕರ್ತರು ಹೊಂದಿರಬೇಕು ಎಂದು ಸಂಘ ಹೇಳಿದೆ.