ತಿರುವನಂತಪುರ: ಈ ವರ್ಷದ ಪೊಂಗಲ ಉತ್ಸವದ ಅಂಗವಾಗಿ ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಕಾಲುನಡೆ ಮೆರವಣಿಗೆ ನಡೆಯಿತು.
ಸಮಾರಂಭವು ದೇವಾಲಯದೊಳಗಿನ ಮಹಾಗಣಪತಿ ವಿಗ್ರಹದ ಬಳಿ ನಡೆಯಿತು. ಸೋಮವಾರ ಬೆಳಿಗ್ಗೆ 7.30 ಕ್ಕೆ ಪೂಜೆಗಳನ್ನು ಮೆಲ್ಶಾಂತಿ ಈಶ್ವರನ್ ನಂಬೂತಿರಿ ನಡೆಸಿದರು. ಫೆ.19 ರಂದು ಕಾಪ್ಪುಕೆಟ್ಟಿ ಎಂಬ ಕ್ರಮದೊಂದಿಗೆ ಅಟ್ಟುಕ್ಕಾಲ್ ಉತ್ಸವ ಪ್ರಾರಂಭವಾಗಲಿದೆ. ಸರ್ಕಾರದ ನಿರ್ದೇಶಾನುಸಾರ ಪೆÇಂಗಲಾ ಆಚರಣೆಯ ಬಗೆಗಿನ ಕ್ರಮಗಳನ್ನು ನಿರ್ಧರಿಸಲಾಗುವುದೆಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.