HEALTH TIPS

ಸೆರಮ್ ಇನ್ಸ್ಟಿಟ್ಯೂಟ್ ನಿಂದ ಮತ್ತೊಂದು ಕೋವಿಡ್-19 ಲಸಿಕೆ; ಪ್ರಯೋಗ ಆರಂಭಿಸಲು ಅರ್ಜಿ

          ಪುಣೆ: ಮತ್ತೊಂದು ಕೋವಿಡ್-19 ಲಸಿಕೆ ಪ್ರಯೋಗ ಆರಂಭಕ್ಕೆ ತಮ್ಮ ಕಂಪನಿ ಅರ್ಜಿ ಸಲ್ಲಿಸಿದ್ದು, ಜೂನ್ ತಿಂಗಳೊಳಗೆ ಅದು ಹೊರಬರುವ ವಿಶ್ವಾಸ ಹೊಂದಿರುವುದಾಗಿ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಶನಿವಾರ ಹೇಳಿದ್ದಾರೆ.

       ಪುಣೆ ಮೂಲದ ಕಂಪನಿ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ -ಸ್ವಿಡೀಸ್ ಕಂಪನಿ ಅಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.  ಸದ್ಯ ನಡೆಯುತ್ತಿರುವ ಕೋವಿಡ್- ಲಸಿಕಾ ವಿತರಣಾ ಅಭಿಯಾನಕ್ಕಾಗಿ ಕೇಂದ್ರ  ಸರ್ಕಾರ, ಕೋವಿಶೀಲ್ಡ್ ಲಸಿಕೆಯ  11 ಮಿಲಿಯನ್ ಡೋಸ್ ಗಳನ್ನು  ಖರೀದಿಸಿದೆ.

        'ನೊವಾವ್ಯಾಕ್ಸ್ ' ಲಸಿಕೆಗಾಗಿ ನಮ್ಮ ಸಹಭಾಗಿತ್ವ ದಕ್ಷ, ಪರಿಣಾಮಕಾರಿ ಫಲಿತಾಂಶ ತೋರಿದ್ದು,  ದೇಶದಲ್ಲಿ  ಪ್ರಯೋಗ ಆರಂಭಿಸಲು ಅರ್ಜಿ ಸಲ್ಲಿಸಲಾಗಿದೆ.  ಜೂನ್ 2021ರೊಳಗೆ ಬಿಡುಗಡೆ ಮಾಡಲಾಗುವುದು ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

     ಜನವರಿ 16ರಿಂದ ದೇಶದಲ್ಲಿ ಕೋವಿಡ್- ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದ್ದು, ವಿಶ್ವದ ಅತ್ಯಂತ ದೊಡ್ಡ ಲಸಿಕಾ ಕಾರ್ಯಕ್ರಮ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದು, ಸುಮಾರು 3 ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.



Our partnership for a COVID-19 vaccine with @Novavax has also published excellent efficacy results. We have also applied to start trials in India. Hope to launch #COVOVAX by June 2021!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries