ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಫೆ. 1ರಿಂದ 5ರ ವರೆಗೆ ಜರುಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮಾನದಂಡ ಪಾಲನೆಯೊಂದಿಗೆ ಧಾರ್ಮಿಕ, ದೈವಿಕ ವಿಧಿ ವಿಧಾನಗಳನ್ನು ಮಾತ್ರ ನಡೆಸಲಾಗುವುದು. ಎಲ್ಲಾ ಐದು ದಿವಸಗಳ ಕಾಲ ಜಾತ್ರಾ ನೈಮಿತ್ತಿಕ ಕಾರ್ಯಗಳು, ಧಾರ್ಮಿಕ ವಿಧಾನಗಳು ನಡೆಯಲಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.