HEALTH TIPS

ಮೇಡ್ ಇನ್ ಇಂಡಿಯಾ' 2 ಕೋವಿಡ್-19 ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣೆಗೆ ಭಾರತ ಸಿದ್ಧವಾಗಿದೆ: ಪ್ರಧಾನಿ ಮೋದಿ

        ನವದೆಹಲಿ: 'ಮೇಡ್ ಇನ್ ಇಂಡಿಯಾ' 2 ಕೋವಿಡ್ -19 ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣೆಗೆ ಭಾರತ ಸಿದ್ಧವಾಗಿದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಡವರನ್ನು ಸಬಲೀಕರಣಗೊಳಿಸುವ ಭಾರತದ ಪ್ರಯತ್ನಗಳ ಕುರಿತು ಇಂದು ಇಡೀ ವಿಶ್ವವೇ ಚರ್ಚೆ ಜಗತ್ತು ಚರ್ಚಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ  ಮೋದಿಯವರು ಶನಿವಾರ ಹೇಳಿದ್ದಾರೆ. 

        16ನೇ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋದಿಯವರು, ಮೇಡ್ ಇನ್ ಇಂಡಿಯಾದ 2 ಕೊರೋನಾ ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣಗೆ ಭಾರತ ಸಿದ್ಧವಾಗಿದೆ. ಈ ಹಿಂದೆಯೂ ಮಾನವೀಯತೆ ರಕ್ಷಣೆ ಮಾಡುವ ಕಾರ್ಯವನ್ನು ಮಾಡಿತ್ತು. ಈಗಲೂ ಅದನ್ನೇ ಮಾಡುತ್ತಿದೆ ಎಂದು ಹೇಳಿದ್ದಾರೆ. 

       ಇಂದು ಇಡೀ ವಿಶ್ವ ಭಾರತದ ಲಸಿಕೆಗಳಿಗಾಗಿ ಕಾಯುತ್ತಿರುವುದಷ್ಟೇ ಅಲ್ಲ, ಭಾರತ ಲಸಿಕೆ ಕಾರ್ಯಾಚರಣೆಯನ್ನು ಯಾವ ರೀತಿ ನಡೆಸುತ್ತದೆ ಎಂಬುದರ ಮೇಲೂ ನಿಗಾ ಇಟ್ಟಿದೆ. ಕೊರೋನಾ ಸಾಂಕ್ರಾಮಿಕ ರೋಗ ಭಾರತ ಸಾಕಷ್ಟು ಕಲಿಯುವಂತೆ ಮಾಡಿರಬಹುದು ಆದರೆ, ಸ್ವಾವಲಂಬಿಯಾಗುವಂತೆ ಮಾಡಿರುವುದು ಪ್ರೇರಣೆಯಾಗಿದೆ. 

       ಭಾರತ ಈ ಹಿಂದೆ ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಹಾಗೂ ಟೆಸ್ಟ್ ಕಿಟ್ ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಸ್ವಾವಲಂಬಿಯಾಗಿದೆ.

      ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಡವರನ್ನು ಸಬಲೀಕರಣಗೊಳಿಸುವ ಭಾರತದ ಪ್ರಯತ್ನಗಳ ಕುರಿತು ಇಂದು ಇಡೀ ವಿಶ್ವವೇ ಚರ್ಚೆ ಜಗತ್ತು ಚರ್ಚಿಸುತ್ತಿದೆ. ಭಯೋತ್ಪಾದನೆ ವಿರುದ್ಧ ಭಾರತ ತಿರುಗಿ ನಿಂತಾಗ ಇಡೀ ವಿಶ್ವಕ್ಕೆ ಸವಾಲು ಎದುರಿಸುವ ಧೈರ್ಯ ಸಿಕ್ಕಂತಾಯಿತು. ಇಂದು ಭಾರತ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಈ ತಂತ್ರಜ್ಞಾನಗಳ ಮೂಲಕವೇ ಲಕ್ಷ ಮತ್ತು ಕೋಟಿ ಮೌಲ್ಯದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. 

        ಬಡವರ ಸಬಲೀಕರಣಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಅಭಿಯಾನ ಕುರಿತು ಇಂದು ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ ಕೂಡ ಮುನ್ನಡೆ ಸಾಧಿಸಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ. 

     ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ದೇಶದ ಪ್ರತೀಯೊಬ್ಬ ನಾಗರೀಕನಿಗೂ ಲಸಿಕೆ ನೀಡಲಾಗುತ್ತದೆ ಎಂದು ನಿನ್ನೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹೇಳಿದ್ದರು. 

       ಭಾರತದಲ್ಲಿ ಪ್ರಜಾಪ್ರಭುತ್ವವು ಅತ್ಯಂತ ಪ್ರಬಲವಾಗಿದೆ
      ಭಾರತದ ಪ್ರಜಾಪ್ರಭುತ್ವದ ಬಗ್ಗೆ ಒಂದೊಮ್ಮೆ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ, ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಬಲಶಾಲಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. 

       ಭಾರತ ಸ್ವಾತಂತ್ರ್ಯ ಪಡೆದಾಗ, ಭಾರತದ ಬಡತನದ ರಾಷಅಟ್ರವಾಗಿದ್ದು, ಇಲ್ಲಿನ ಜನರು ಅಷ್ಟು ಸುಶಿಕ್ಷತರಲ್ಲದ ಕಾರಣ ದೇಶದ ಒಡೆದು ಹೋಗಲಿದೆ ಎಂದು ಕೆಲವರು ಭಾವಿಸಿದ್ದರು. ಆದರೆ ಕಾಲ ಕಳೆಯುತ್ತಿದ್ದಂತೆ ನಮ್ಮ ದೇಶ ಹಾಗೂ ನಮ್ಮ ದೇಶದ ಜನರ ಬಗ್ಗೆ ಇದ್ದ ಕಲ್ಪನೆಗಳಲ್ಲಾ ತಪ್ಪು ಎಂದು ಸಾಬೀತಾಯಿತು ಎಂಬುದಕ್ಕೆ ಭಾರತದ ಇತಿಹಾಸವೇ ಸಾಕ್ಷಿಯಾಗಿದೆ. 

       ವಸಾಹತು ಶಾಹಿ ಆಳ್ವಿಕೆಯಲ್ಲಿ ಸಾಕಷ್ಟು ವಿದ್ವಾಂಸಕರು, ಭಾರತದ ವಿಭಜಿಸದಂತೆ ಎಂದಿಗೂ ಸ್ವತಂತ್ರರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಪ್ರಜಾಪ್ರಭುತ್ವ ಸ್ಥಾಪನೆ ಅಸಾಧ್ಯ ಎಂದು ಹೇಳಿದ್ದರು. ಆದರೆ, ಆ ಕಲ್ಪನೆಗಳು ತಪ್ಪೆಂದು ಸಾಬೀತಾಗಿದೆ. ವಾಸ್ತವಾಗಿ ಹೇಳಬೇಕೆಂದರೆ, ಭಾರತ ಏಕೀಕೃತವಾಗಿದೆ. ಇಲ್ಲಿನ ಪ್ರಜಾಪ್ರಭುದ್ವ ಅತ್ಯಂತ ಬಲಶಾಲಿಯಾಗಿದೆ. ಇಂದು ನಮ್ಮ ದೇಶ ಅದ್ಭುತ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. 

     ಬಡ ರಾಷ್ಟ್ರವೆಂದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸಾಕಷ್ಟು ಜನರು ಹಿಂದೇಟು ಹಾಕುತ್ತಿದ್ದರು. ಆದರೆ, ಭಾರತದ ಬಾಹ್ಯಾಕಾಶದ ಯೋಜನೆ ಹಾಗೂ ನಮ್ಮ ಸ್ಟಾರ್ಟ್ ಅಪ್ ಈಕೋ ಸಿಸ್ಟಮ್ ಇಡೀ ವಿಶ್ವದಲ್ಲಿಯೇ ಅತ್ಯುತ್ತವಾಗಿದೆ. ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿಯೂ ನಮ್ಮ ರಾಷ್ಟ್ರ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೇ ತೋರಿಸಿಕೊಟ್ಟಿದೆ ಎಂದು ಕೊಂಡಾಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries