ತಿರುವನಂತಪುರ: ಕೇರಳದಲ್ಲಿ ಅವಿವಾಹಿತ ಸ್ತ್ರೀಯರ ಕಲ್ಯಾಣಕ್ಕಾಗಿ ಪ್ರಾರಂಭಿಸಲಾದ ಸ್ನೇಹ ಸ್ಪರ್ಶಂ ಯೋಜನೆಗೆ ಹಣಕಾಸು ಇಲಾಖೆ 3.03 ಕೋಟಿ ರೂ.ನಿಧಿ ಅನುಮತಿಸಿದೆ ಎಂದು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ.ಶೈಲಜ ನಿನ್ನೆ ತಿಳಿಸಿದರು. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಚಿವೆ 3,03,48,000 ಕೋಟಿ ರೂ. ನಿಧಿ ಮಂಜೂರಾಗಿದೆ ಎಂದರು.
ಶೋಷಣೆಗೆ ಒಳಗಾದ ಅವಿವಾಹಿತ ತಾಯಂದಿರು ತಮ್ಮ ಕುಟುಂಬ ಮತ್ತು ಸಮಾಜದಿಂದ ಪ್ರತ್ಯೇಕವಾಗಿ ಬದುಕಬೇಕಾಗುತ್ತದೆ. ಅಂತಹ ಜನರಿಗೆ ಅವರ ದೈನಂದಿನ ಜೀವನಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಪುನರ್ವಸತಿ ಕಲ್ಪಿಸಲು ವಿನ್ಯಾಸಗೊಳಿಸಲಾದ ಯೋಜನೆಯಾಗಿದೆ ಸ್ನೇಹಸ್ಪರ್ಷಂ.
ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸಹಾಯವನ್ನು ತಿಂಗಳಿಗೆ ರೂ 1000 ದಿಂದ ರೂ 2000 ಕ್ಕೆ ಹೆಚ್ಚಿಸಿತು. ಪರಿಶಿಷ್ಟ ಪಂಗಡಕ್ಕೆ ಸೇರಿದ ಅವಿವಾಹಿತ ತಾಯಂದಿರಿಗೆ ಮಾತ್ರ ಲಭ್ಯವಿರುವ ಈ ಪ್ರಯೋಜನವನ್ನು ನಂತರ ಇತರ ಅವಿವಾಹಿತ ಬಡ ತಾಯಂದಿರಿಗೂ ವಿಸ್ತರಿಸಲು ತಿದ್ದುಪಡಿ ಮಾಡಲಾಯಿತು.
ಇದೆ ಪ್ರಯೋಜನವು ಪ್ರಸ್ತುತ ಮದುವೆಯಾಗಿರುವ ಅಥವಾ ಯಾವುದೇ ಪುರುಷರೊಂದಿಗೆ ಕುಟುಂಬದೊಂದಿಗೆ ವಾಸಿಸುವವರಿಗೆ ಲಭ್ಯವಾಗದು. ಅರ್ಜಿಯನ್ನು ಸಂಬಂಧಪಟ್ಟ ಸಾಮಾಜಿಕ ನ್ಯಾಯ ಇಲಾಖೆಯ ಕಚೇರಿಯಲ್ಲಿ ಮತ್ತು ಸಾಮಾಜಿಕ ಭದ್ರತಾ ಮಿಷನ್ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಅಥವಾ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿಗಳಿಗೆ ಸಲ್ಲಿಸಬೇಕು.