ತಿರುವನಂತಪುರ: 2020-21ನೇ ಸಾಲಿನ ಎಲ್.ಎಸ್.ಎಸ್ ಮತ್ತು ಯು.ಎಸ್.ಎಸ್ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಗಳು ಏಪ್ರಿಲ್ 7 ರಂದು ನಡೆಯಲಿದೆ. ವಿವರವಾದ ವೇಳಾಪಟ್ಟಿ ಮತ್ತು ಪಠ್ಯಕ್ರಮ ಸೇರಿದಂತೆ ಅಧಿಸೂಚನೆಯನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುವುದು.
ಪರೀಕ್ಷೆಯು ರಾಜ್ಯದ ಶಾಲೆಗಳಲ್ಲಿ ನಾಲ್ಕು ಮತ್ತು ಏಳನೇ ತರಗತಿಯಲ್ಲಿ ಕಲಿಯುವ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಭಾಷಾ ಅಧ್ಯಯನ, ಗಣಿತ ಮತ್ತು ಪರಿಸರ ಅಧ್ಯಯನಗಳಲ್ಲಿ ನಿರ್ದಿಷ್ಟ ತರಗತಿಗಳಲ್ಲಿ ಮಗುವಿನ ಜ್ಞಾನ ಮತ್ತು ಪ್ರಾಯೋಗಿಕ ಅಭ್ಯಾಸವನ್ನು ಪರೀಕ್ಷೆಯಲ್ಲಿ ಪರಿಗಣಿಸಲ್ಪಡುತ್ತದೆ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.