ಶಾಲೆಯ ಹ್ಯೆಯರ್ ಸೆಕಂಡರಿಯ ವಿದ್ಯಾರ್ಥಿಯೊಬ್ಬನಿಗೆ ಕೆಲವು ದಿನದ ಹಿಂದೆ ಕೋವಿಡ್ ದೃಢಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನು ಸಂಪರ್ಕ ಬೆಳೆಸಿದ್ದ ಸಹಪಾಠಿಗಳನ್ನು ನಿನ್ನೆ ಪರೀಕ್ಷೆಗೊಳಪಡಿಸಲಾಗಿತ್ತು. ಶಾಲೆಯಲ್ಲಿ ಐದು ಬ್ಯಾಚ್ ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಈ ಪೈಕಿ ಹೆಚ್ಚಿನವರಿಗೂ ಕೋವಿಡ್ ದೃಢ ಪಡಿಸಲಾಗಿದೆ. ಪ್ರಸ್ತುತ ತಾತ್ಕಾಲಿಕವಾಗಿ ಶಾಲೆ ಮುಚ್ಚಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ. ಧನ್ಯಾ, ವೈದ್ಯಕೀಯ ಅಧಿಕಾರಿ ಡಾ. ಗೋಪಿ ಮತ್ತು ಪಿಟಿಎ ಅಧ್ಯಕ್ಷ ಸುರೇಶ್ ಪಾಯಂ ಸಭೆಯಲ್ಲಿ ಭಾಗವಹಿಸಿದ್ದರು.