ಕಾಸರಗೋಡು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಷಷ್ಟ್ಯಬ್ದ ಸಂಭ್ರಮ ಆಚರಣೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕಾಸರಗೋಡು ವಲಯ ಸಮಿತಿ ಸಭೆ ಜ. 22ರಂದು ಸಂಜೆ 5ಕ್ಕೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ಜ. 29ರಂದು ಒಡಿಯೂರುಶ್ರೀಗಳ ಉಪಸ್ಥಿತಿಯಲ್ಲಿ ಕಾಸರಗೋಡು ವಲಯ ಸಮಿತಿ ಪದಾಧಿಕಾರಿಗಳ ಪದಗ್ರಹಣ, ಮಧೂರು ದೇವಸ್ಥಾನ ಪರಿಸರದಲ್ಲಿ ನೇಜಿ ನೆಡುವ ಕಾರ್ಯಕ್ರಮ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇವುಗಳ ಯಶಸ್ವಿಗೊಳಿಸುವ ಸಭೆಯಲ್ಲಿ ಬಗ್ಗೆಯೂ ಚರ್ಚೆ ನಡೆಯಲಿರುವುzಗಿ ಪ್ರಕಟಣೆ ತಿಳಿಸಿದೆ.