ಉಪ್ಪಳ: ಪರಂಪರೆಯೇತರ ಸೌರಶಕ್ತಿ ಸಂಪರನ್ಮೂಲ ಗರಿಷ್ಠ ಮಟ್ಟದಲ್ಲಿ ಬಳಸಿ ವಿದ್ಯುತ್ ವಲಯ ಬಲಪಡಿಸುವ ಸರಕಾರಿ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆ ಸೌರಶಕ್ತಿ ಪರಿಪೂರ್ಣತೆಯತ್ತ ಸಾಗುತ್ತಿದೆ. ವಿವಿಧ ಯೋಜನೆಗಳ ಅನುಷ್ಠಾನ ಮೂಲಕ ರಾಜ್ಯದಲ್ಲೇ ಅತಿದೊಡ್ಡ ಸೌರಶಕ್ತಿ ಉತ್ಪಾದನೆ ಕಾಸರಗೋಡು ಜಿಲ್ಲೆಯಲ್ಲೇ ನಡೆಯಲಿದೆ.
ದ್ವಿತೀಯ ಯೋಜನೆ ಸಿದ್ಧ:
ರಾಜ್ಯದ ಸೌರಶಕ್ತಿ ವಿದ್ಯುತ್ ಅಗತ್ಯ ಪೂರೈಕೆ ಉದ್ದೇಶಿಸಿ ಆರಂಭಿಸಲಾದ ಸೋಲಾರ್ ಪಾರ್ಕ್ ನ ದ್ವಿತೀಯ ಸೋಲಾರ್ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. ಪೈವಳಿಕೆಯ ಕೊಮ್ಮಂಗಳದಲ್ಲಿ 250 ಎಕ್ರೆ ಜಾಗದಲ್ಲಿ ಯೋಜನೆ ಸಿದ್ಧವಾಗಿದೆ. ಈ ಯೋಜನೆಯ ಉದ್ಘಾಟನೆ ಜ.23ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸುವರು. ಅಧಿಕಗೊಳ್ಳುತ್ತಿರುವ ವಿದ್ಯುತ್ ಬಳಕೆ ಅಗತ್ಯದ ಪರಿಹಾರಕ್ಕೆ ಸೌರಶಕ್ತಿಯ ಗರಿಷ್ಠತಮ ಬಳಕೆ ಉದ್ದೇಶದಿಂದ ಕೇಂದ್ರ ಸರಕಾರಿ ಯೋಜನೆ ಜವಾಹರ್ ಲಾಲ್ ನೆಹರೂ ನ್ಯಾಷನಲ್ ಸೋಲಾರ್ ಮಿಷನ್ ನಲ್ಲಿ ಅಳವಡಿಸಿ ಈ ಯೋಜನೆ ಜಾರಿಗೊಳ್ಳಲಿದೆ.
ತೃತೀಯ ಹಂತ ನೆಲ್ಲತ್ತಡಂ ನಲ್ಲಿ:
ಜಿಲ್ಲೆಯಲ್ಲಿ 105 ಮೆಗಾವಾಟ್ ಉತ್ಪಾದಿಸುವ ಸೋಲಾರ್ ಪಾರ್ಕ್ ನ ಮೊದಲ ಹಂತ ಅಂಬಲತ್ತರ ವೆಳ್ಳಡ ಎಂಬಲ್ಲಿ ಕಳೆದ ವರ್ಷ ಉದ್ಘಾಟಿಸಲಾಗಿತ್ತು. ಇದರ ಎರಡನೇ ಹಂತ ಪೈವಳಿಕೆಯಲ್ಲಿ ನಡೆಯುತ್ತಿದೆ. 5 ಮೆಗಾ ವಾಟ್ ನ ಮೂರನೇ ಹಂತ ನೆಲ್ಲಿತ್ತಡಂನಲ್ಲಿ ಆರಂಭಿಸಲಾಗುವುದು.
ಈ ಮೂರೂ ಕಡಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 66 ಕೋಟಿ ರೂ. ಸೋಲಾರ್ ಪಾರ್ಕ್ ಯೋಜನೆಗಾಗಿ ಮಂಜೂರುಮಾಡಲಾಗಿದೆ. ಇದರ ಶೇ 30 ಕೇಂದ್ರ ಸರಕಾರದ ಸಬ್ಸಿಡಿಯಾಗಿದೆ. 240 ಕೋಟಿ ರೂ.ನಷ್ಟು ಭಂಡವಾಳದಲ್ಲಿ ಕೇಂದ್ರ ಸಾರ್ವಜನಿಕ ಸಂಸ್ಥೆ ತೆಹರಿ ಹೈಡ್ರೋ ಡೆವೆಲಪ್ ಮೆಂಟ್ ಕಾರ್ಪರೇಷನ್ ಆಫ್ ಇಂಡಿಯಾ ಪೈವಳಿಕೆಯ ಸೋಲಾರ್ ಪ್ಲಾಂಟ್ ಸಿದ್ಧಪಡಿಸಲಿದೆ. ಯೋಜನೆಗಾಗಿ 250 ಎಕ್ರೆ ಜಾಗವನ್ನು ಕೆ.ಎಸ್.ಇ.ಬಿ. ಮತ್ತುಇ ಸೋಲಾರ್ ಎನರ್ಜಿ ಕಾರ್ಪರೇಷನ್ ಆಫ್ ಇಂಡಿಯಾ ಸಮಾತ ಪಾಲುದಾರಿಕೆ ಹೊಂದಿರುವ ಸಾರ್ವಜನಿಕ ಕಂಪನಿಯಾಗಿರುವ ರೆನ್ಯೂವೆಬಲ್ ಪವರ್ ಕಾರ್ಪರೇಷನ್ ಆಫ್ ಕೇರಳ ಲಿಮಿಟೆಡ್ ಸೋಲಾರ್ ಪಾರ್ಕ್ ನ ಚಟುವಟಿಕೆಗಳ ಮೇಲ್ನೋಟ ವಹಿಸಲಿದೆ.
ಕಾಸರಗೋಡು, ಮಂಜೇಶ್ವರ ವಲಯಗಳ ವಿದ್ಯುತ್ ಸಮಸ್ಯೆಗೆ ಪರಿಹಾರ
ಪೈವಳಿಕೆಯಲ್ಲಿ ಉತ್ಪಾದಿಸುವ ವಿದ್ಯುತ್ ಕುಬಣೂರು 110 ಕೆ.ವಿ. ಸಬ್ ಸ್ಟೇಷನ್ ಮೂಲಕ ಕೆ.ಎಸ್.ಇ.ಬಿ. ವಹಿಸಿಕೊಳ್ಳಲಿದೆ. ಯೋಜನೆ ನೆಲೆಗೊಳ್ಳುವ ಕಮರ್ಂತೋಡಿಯಿಂದ ಕುಬಣೂರಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ 8.5 ಕಿ.ಮೀ. ಕವರ್ಡ್ ಕಂಟೈನರ್ ಇರುವ 33 ಕೆ.ವಿ.ಡಬಲ್ ಸೆಕ್ರ್ಯೂಟ್ ಲೈನ್ ಸ್ಥಾಪಿಸಲಾಗಿದೆ. ಈ ಮೂಲಕ ತಲಪುವ ವಿದ್ಯುತ್ ಕುಬಣೂರು ಸಬ್ ಸಟೇಷನ್ ನ ಎರಡು 25 ಎಂ.ವಿ.ಎ. ಟ್ರಾನ್ಸ್ ಫಾರ್ಮರ್ ಗಳ ಮೂಲಕ ಸ್ವೀಕಾರ ನಡೆಸಿ ಪೂರೈಕೆ ಮಾಡಲಾಗುವುದು. ಪೈವಳಿಕೆ ಸಬ್ ಸ್ಟೇಷನ್ 2020 ಡಿ.31ರಂದು ಕಂಮೀಷನ್ ಗೊಂಡಿದ್ದು ಸರಬರಾಜು ಆರಂಭಗೊಂಡಿದೆ.
ಪೈವಳಿಕೆಯ ಯೋಜನೆ ಸಹ ಜಾರಿಗೊಳ್ಳುವ ಮೂಲಕ ಕಾಸರಗೋಡು ಜಿಲ್ಲೆಯ ವಿದ್ಯುತ್ ವಲಯದಲ್ಲಿ ಬೃಹತ್ ಮುನ್ನಡೆ ಸಾಧಿಸಿದಂತಾಗುವುದು. ಕಾಸರಗೋಡು, ಮಂಜೇಶ್ವರ ವಲಯದಲ್ಲಿ ವಿದ್ಯುತ್ ಪೂರೈಕೆ ಸಂಬಂಧ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ರೆನ್ಯವೆಬಲ್ ಪವರ್ ಕಾರ್ಪರೇಷನ್ ಆಫ್ ಕೇರಳ ಲಿಮಿಟೆಡ್ (ಆರ್.ಪಿ.ಸಿ.ಕೆ.ಎಲ್.) ಸಿ.ಇ.ಒ. ಆಗಸ್ಟಿನ್ ಥಾಮಸ್ ತಿಳಿಸಿದರು.
ಗ್ರೀನ್ ಕೇಂದ್ರಿತ ಸೋಲಾರ್ ಪವರ್ ಪ್ಲಾಂಟ್:
ಕಾಸರಗೋಡು ಜಿಲ್ಲಾ ಪಂಚಾಯತ್ ಮ ಸ್ವಾಮ್ಯದಲ್ಲಿರುವ 84 ಶಾಲೆಗಳ, ಪಡನ್ನಕ್ಕಾಡ್ ಜಿಲ್ಲಾ ಆಯುರ್ವೇದ ಆಸ್ಪತ್ರೆ, ಜಿಲ್ಲಾ ಅಲೋಪತಿ ಆಸ್ಪತ್ರೆ ಎಂಬ ಕಡೆಗಳಲ್ಲಿ ಗ್ರೀನ್ ಕೇಂದ್ರಿತ ಸೋಲಾರ್ ಪವರ್ ಪ್ಲಾಂಟ್ ಸ್ಥಾಪಿಸಿ, ಜಿಲ್ಲೆಯ ವಿದ್ಯುತ್ ವಲಯದಲ್ಲಿ ದೊಡ್ಡ ಮುನ್ನಡೆ ಸಾಧಿಸಲಾಗಿದೆ. ಯೋಜನೆಗಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 12.65 ಕೋಟಿ ರೂ. ಮೀಸಲಿರಿಸಲಾಗಿದೆ.
ಮುಂದಿನ ಮೂರು ವರ್ಷಗಳ ಕಾಲ "ಸೌರ":
ಸೌರಶಕ್ತಿ ವಿದ್ಯುತ್ ಕಡಿಮೆ ವೆಚ್ಚದಲ್ಲಿ ಉತ್ಪಾದಿಸುವ ಯೋಜನೆ "ಸೌರ" ಪ್ರಕಾರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೆ.ಎಸ್.ಇ.ಬಿ. ನಿಗಮ ದ ನೇತೃತ್ವದಲ್ಲಿ 1000 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಇದರಲ್ಲಿ 500 ಮೆಗಾವಾಟ್ ಪೂರಪ್ಪುರ ಸೌರಶಕ್ತಿ ಯೋಜನೆ ಮೂಲಕ ಉತ್ಪಾದನೆಯಾಗಲಿದೆ. ಸೌರ ಸಬ್ಸಿಡಿ ಯೋಜನೆ ಮೋಡೆಲ್ ಎ ಯಲ್ಲಿ ಪ್ರತಿತಿಂಗಳು ಸರಾಸರಿ 120 ಯೂನಿಟ್ ವರೆಗೆ ಉತ್ಪಾದಿಸುವ ಮಂದಿಗೆ ಸೌರ ಸಬ್ಸಿಡಿ ಯೋಜನೆ(ಮೋಡೆಲ್ ಒಂದು ಎ), ಪ್ರತಿತಿಂಗಳ ಸರಾಸರಿ ಬಳಕೆ 150 ಯೂನಿಟ್ ವರೆಗಿನ ಬಳಕೆದಾರರಿಗೆ ಸೌರ ಸಬ್ಸಿಡಿ ಯೋಜನೆ(ಮೋಡೆಲ್ ಒಂದು ಬಿ), ಪ್ರತಿತಿಂಗಳ ಸರಾಸರಿ ಬಳಕೆ 200 ಯೂನಿಟ್ ವರೆಗಿನ ಬಳಕೆದಾರರಿಗೆ ಸೌರ ಸಬ್ಸಿಡಿ ಯೋಜನೆ(ಮೋಡೆಲ್ ಒಂದು ಸಿ) ಇತ್ಯಾದಿ ಅಳವಡಗೊಳ್ಳಲಿದೆ.
ಸೌರ ಸಬ್ಸಿಡಿ ಯೋಜನೆ ಮೋಡೆಲ್ ಬಿಯಲ್ಲಿ ಉತ್ಪಾದನೆ ನಡೆಸುವಲ್ಲಿಂದ ಬಳಕೆದಾರರ ಅಗತ್ಯ ಕಳೆದು ಉಳಿಯುವ ವಿದ್ಯುತ್ ರೆಗ್ಯುಲೇಟರ್ ಕಮೀಷನ್ ನಿಗದಿ ಪಡಿಸಿರುವ ದರದಲ್ಲಿ ಕೆ.ಎಸ್.ಇ.ಬಿಗೆ ನೀಡಬಹುದಾಗಿದೆ. ಪ್ಲಾಂಟ್ ನ ಮೈ ಂಟೆನೆನ್ಸ್ 5 ವರ್ಷದ ಅವಧಿಗೆ ಕೆ.ಎಸ್.ಇ.ಬಿ. ನಿಗಮ ವಹಿಸಿಕೊಳ್ಳಲಿದೆ. ಎಲ್ಲ ಗೃಹ ಬಳಕೆದಾರರೂ ಅರ್ಜಿ ಸಲ್ಲಿಸಬಹುದು. ಪೂರಪ್ಪುರದ ಒಂದು ಕಿಲೋ ನಿಲಯಕ್ಕೆ 100 ಚದರ ಅಡಿ ವಿಸ್ತೀರ್ಣ ಜಾಗದ ಅಗತ್ಯವಿದೆ.
ರಾಜ್ಯದ ಪ್ರಪ್ರಥಮ ಸೋಲಾರ್ ಪಾರ್ಕ್ ಕಾಸರಗೋಡಿನಲ್ಲಿ:
ವಿದ್ಯುತ್ ಉತ್ಪಾದನೆಯ ಶೇ 10 ಸೌರಶಕ್ತಿಯ ಮೂಲಕ ಎಂಬ ಗುರಿಯೊಂದಿಗೆ ಜಾರಿಗೊಳ್ಳಲಿರುವ ರಾಜ್ಯದ ಪ್ರ ಪ್ರಥಮ ಮೆಗಾ ಸೋಲಾರ್ ಪಾರ್ಕ್ ಕಾಸರಗೋಡಿನಲ್ಲಿದೆ. ಅಂಬಲತ್ತರ ವೆಳ್ಳುಡದಲ್ಲಿ ಈ ಪಾರ್ಕ್ ಚಟುವಟಿಕೆ ಆರಮಭಿಸಿದೆ. ಕಂದಾಯ ಇಲಖೆ ಕೆ.ಎಸ್.ಇ.ಬಿ.ಗೆ ಹಸ್ತಾಂತರಿಸಿರುವ 250 ಎಕ್ರೆ ಜಾಗದಲ್ಲಿ ಈ ಯೋಜನೆ ಜಾರಿಗೊಂಡಿದೆ. ರಾಜ್ಯದ ಪ್ರಥಮ ಸೋಲಾರ್ ಸಬ್ ಸಟೇಷನ್ ಕೂಡ ಅಂಬಲತ್ತರದಲ್ಲಿ ಸ್ಥಾಪಿಸಲಾಗಿದೆ. ಪಾರ್ಕ್ ಸಂಬಂಧ 220 ಕೆ.ವಿ. ಸಬ್ ಸ್ಟೇಷನ್ ನಿರ್ಮಿಸಲಾಗಿದೆ. ಈ ಮೂಲಕ ವಿದ್ಯುತ್ ತಲಪಿಸಲಾಗುತ್ತಿದೆ. 25 ವರ್ಷದ ಲೀಸ್ ಕರಾರಿನಲ್ಲಿ ಜಾಗ ನೀಡಲಾಗಿದೆ. ಮೊದಲ 5 ವರ್ಷ ಉಚಿತವಾಗಿರುವುದು. ಸಾರ್ವಜನಿಕ ಸಂಸ್ಥೆ ಇಂಡಿಯನ್ ರೆನ್ಯವೆಬಲ್ ಎನರ್ಜಿ ಡೆವೆಲಪ್ ಮೆಂಟ್ ಏಜೆನ್ಸಿ (ಐ.ಶಾರ್.ಇ.ಡಿ.ಎ.) ಸೋಲಾರ್ ಪಾರ್ಕ್ ನಿರ್ಮಿಸಿದೆ. ಜಾಕ್ಸನ್ ಏಜೆನ್ಸಿ ಯರ್ಸ್ ಎಂಬ ಖಸಗಿ ಸಂಸ್ಥೆ ಟೆಂಡರ್ ಕ್ರಮಗಳ ಮೂಲಕ ಕರಾರು ನೀಡಿದೆ. ಸೋಲಾರ್ ಪಾರ್ಕ್ ನಲ್ಲಿ ಉತ್ಪಾದಿಸಲಾಗುವ ವಿದ್ಯುತ್ ಕೆ.ಎಸ್.ಇ.ಬಿ.ಗೆ ನಿಗದಿತ ದರದಲ್ಲಿ ಐ.ಆರ್.ಇ.ಡಿ.ಎ. ಮಾರಾಟ ನಡೆಸಲಿದೆ.
ಸೋಲಾರ್ ಪಾರ್ಕ್ ಬಂತು, ವೆಳ್ಳೂಡದಲ್ಲಿ ಕಡಿಮೆಯಾದ ಬೇಗೆ
ಅಂಬಲತ್ತರದ ವೆಳ್ಳಡದಲ್ಲಿ ಸೋಲಾರ್ ಪಾರ್ಕ್ ಬಂದಿರುವ ಹಿನ್ನೆಲೆಯಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಆರಂಭಗೊಂಡಿವೆ ಎಂದು ಆರ್.ಪಿ.ಸಿ.ಕೆ.ಎಲ್. ಸಂಸ್ಥೆಯ ಸಿ.ಇ.ಒ.ಆಗಸ್ಟಿನ್ ಥಾಮಸ್ ಅಭಿಪ್ರಾಯಪಟ್ಟರು.
ಎಕ್ರೆಗಟ್ಟಲೆ ಇರುವ ಕರ್ಗಲ್ಲಪಾರೆ ಮತ್ತು ಬಂಜರುಝಾಗದಲ್ಲಿ ಈಗ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗಿದೆ. ಹಿಂದೆ ರಾಜಸ್ಥಾನ ಮತ್ತು ಗುಜರಾತ್ ಗಳ ಉಷ್ಣಾಂಶಕ್ಕೆ ಸಮಾನವಾಗಿದ್ದ ಬೇಗೆ ಇಲ್ಲಿ ತಲೆದೊರುತ್ತಿತ್ತು ಎಂದವರು ನುಡಿದರು.
ವಿವಿಧ ರೀತಿಯ ಸೌರಶಕ್ತಿ ಯೋಜನೆಗಳ ಮೂಲಕ ಕಾಸರಗೋಡು ಜಿಲ್ಲೆ ರಾಜ್ಯದಲ್ಲೆ ಅತ್ಯುತ್ತಮ ರೀತಿ ಮುನ್ನಡೆ ಸಾಧಿಸಲಿದೆ. ಮುಮದಿನ ಕೆಲವೇ ವರ್ಷಗಳಲ್ಲಿ ಸೌರಶಕ್ತಿ ವಲಯದಲ್ಲಿ ಜಿಲ್ಲೆ ಸ್ವಾವಲಂಬಿಯಾಗಿ, ಇತರ ಜಿಲ್ಲೆಗಳಿಗೂ ಸೌರ ವಿದ್ಯುತ್ ಪೂರೈಕೆ ನಡೆಸುವಷ್ಟು ಪ್ರಬಲವಾಗಲಿದೆ.