ತಿರುವನಂತಪುರ: ಮೇ 3 ರಿಂದ 8 ರವರೆಗೆ ಮುಂದುವರಿಕಾ ಶಿಕ್ಷಣ ವಿಭಾಗದ ಹೈಯರ್ ಸೆಕೆಂಡರಿ ದ್ವಿತೀಯ ವರ್ಷದ ಸಮಾನತೆ ಪರೀಕ್ಷೆ, ಪೂರಕ ಪರೀಕ್ಷೆ ಮತ್ತು ಪ್ರಥಮ ವರ್ಷದ ಸಮಾನತೆ ಪರೀಕ್ಷೆ ನಡೆಯಲಿದೆ. ಮೊದಲ ವರ್ಷಕ್ಕೆ 600 ರೂ. ಮತ್ತು ಎರಡನೇ ವರ್ಷಕ್ಕೆ 600 ರೂ. ಪರೀಕ್ಷಾ ಶುಲ್ಕ ಸಲಲಿಸಬೇಕಾಗುತ್ತದೆ. (ಪ್ರಾಯೋಗಿಕ ಪರೀಕ್ಷೆಗಳಿಲ್ಲದ ತರಗತಿಗಳಿಗೆ)
ಎರಡನೇ ವರ್ಷದ (ಪ್ರಾಯೋಗಿಕ ಪರೀಕ್ಷೆಗಳಿರುವವರಿಗೆ) ಪ್ರತಿ ಪರೀಕ್ಷೆಗೂ ರೂ 700 ರೂ. ಮತ್ತು ಪ್ರಥಮ ವರ್ಷದ ಪರೀಕ್ಷೆಗೆ ರೂ.500 ಶುಲ್ಕವನ್ನು ಪಾವತಿಸಲು ಸ|ಊಚಿಸಲಾಗಿದ್ದು, ಶುಲ್ಕ ಪಾವತಿಗೆ ಮಾರ್ಚ್ 5.ಕೊನೆಯ ದಿನಾಂಕವಾಗಿದೆ. ಶುಲ್ಕವನ್ನು ಮಾರ್ಚ್ 9 ರವರೆಗೆ 20 ರೂ.ಗಳ ದಂಡದೊಂದಿಗೆ ಮತ್ತು ಮಾರ್ಚ್ 12 ರವರೆಗೆ 1000 ರೂ.ಗಳ ಸೂಪರ್ ಪೈನ್ ನೊಂದಿಗೆ ಪಾವತಿಸಬಹುದು ಎಂದು ಸೂಚಿಸಲಾಗಿದೆ.
ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ ಸಮಾಂತರ ತರಗತಿ ನೋಂದಾವಣೆ ಕಾಸರಗೋಡು:ರಾಜ್ಯ ಸಾಕ್ಷರತಾ ಮಿಶನ್ ಹಾಗೂ ಸಾರ್ವಜನಿಕ ವಿದ್ಯಾಭ್ಯಾಸ ಇಲಾಖೆ ವತಿಯಿಂದ ಹತ್ತನೇ ತರಗತಿ ಹಾಗೂ ಹೈಯರ್ ಸೆಕೆಂಡರಿ ಸಮಾಂತರ ತರಗತಿಯ 2021-22ನೇ ಸಾಲಿನ ನೋಂದಾವಣೆ ಆರಂಭಗೊಂಡಿದೆ. ಹದಿನೇಲು ವರ್ಷ ಪ್ರಾಯ ಪೂರ್ತಿಯಾದವರಿಗೆ ಹತ್ತನೇ ತರಗತಿ ಹಾಗೂ 22ನೇ ವರ್ಷ ಪೂರ್ತಿಯಾದವರಿಗೆ ಹೈಯರ್ ಸೆಕೆಂಡರಿ ಸಮಾಂತರ ತರಗತಿಗೆ ನೋಂದಾವಣೆ ನಡೆಸಬಹುದಾಗಿದೆ. ಕೋರ್ಸ್ ಶುಲ್ಕ ಉಚಿತವಾಗಿದ್ದು, ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9349429596, 9605623396)ಗೆ ಕರೆಮಾಡುವಂತೆ ಪ್ರಕಟಣೆ ತಿಳಿಸಿದೆ.