ತಿರುವನಂತಪುರ: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೊಳಗಾದ 30 ಟ್ರಾನ್ಸ್‍ಜೆಂಡರ್ ಗಳಿಗೆ ಕೇರಳ ಸಾಮಾಜಿಕ ನ್ಯಾಯ ಇಲಾಖೆ 32,91,716 ರೂ. ನೆರವನ್ನು ನೀಡಲಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ಮಾಹಿತಿ ನೀಡಿರುವರು.
ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ನೀಡಲಾಗುವ ಧನಸಹಾಯವು ಟ್ರಾನ್ಸ್‍ಜೆಂಡರ್ ಸಮುದಾಯದ ಉನ್ನತಿಗಾಗಿ ಸಾಮಾಜಿಕ ನ್ಯಾಯ ಇಲಾಖೆಯು ಜಾರಿಗೆ ತಂದ ಪ್ರಮುಖ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಸ್ತ್ರೀಯಿಂದ ಪುರುಷನಾಗಿ ಬದಲಾಗಲು(ಟ್ರಾನ್ಸ್ ಮೇಲ್) ಇರುವ ಶಸ್ತ್ರಕ್ರಿಯೆಗೊಳಗಾಗುವವರಿಗೆ ಗರಿಷ್ಠ ಐದು ಲಕ್ಷ ರೂ. ಹಾಗೂ ಪುರುಷನಿಂದ ಸ್ತ್ರೀಯರಾಗಿ (ಟ್ರಾನ್ಸ್ ವುಮೆನ್)ಬದಲಾಗುವ ಶಸ್ತ್ರಕ್ರಿಯೆಗೆ ಗರಿಷ್ಠ ಎರಡೂವರೆ ಲಕ್ಷ ರೂ. ನೀಡಲಾಗುತ್ತಿದ್ದು, ಇದೀಗ ಹೆಚ್ಚುವರಿ 54 ಲಕ್ಷ ರೂ. ಮಂಜೂರುಗೊಳಿಸಲಾಗಿದೆ.
ಈಗಾಗಲೇ ನೋಂದಾಯಿಸಲು ಬಾಕಿಯಾದ 30 ಮಂದಿ ಟ್ರಾನ್ಸ್‍ಜೆಂಡರ್ ಗಳಿಗೆ ಈ ಹೆಚ್ಚುವರಿ ಆರ್ಥಿಕ ನೆರವು ನೀಡಲು ಈ ಮೊತ್ತ ಬಳಸಲಾಗುವುದೆಂದು ಸಚಿವರು ಹೇಳಿದರು.
ಈ ವರ್ಷ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಟ್ರಾನ್ಸ್ಜೆಂಡರ್ ವ್ಯಕ್ತಿಗಳಲ್ಲಿ ಒಟ್ಟು 81 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಟ್ರಾನ್ಸ್ ವುಮೆನ್ ವಿಭಾಗದಲ್ಲಿ 54 ಮತ್ತು ಟ್ರಾನ್ಸ್ ಮೆನ್ ವಿಭಾಗದಲ್ಲಿ 27 ಅರ್ಜಿಗಳು ಬಂದಿವೆ. ಈ ಮೊತ್ತವನ್ನು ಟ್ರಾನ್ಸ್ ವುಮೆನ್ ವಿಭಾಗದಲ್ಲಿ 22 ಲಿಂಗಾಯತ ವ್ಯಕ್ತಿಗಳಿಗೆ ಮತ್ತು ಟ್ರಾನ್ಸ್ಮೆನ್ ವಿಭಾಗದ ಎಲ್ಲ ವ್ಯಕ್ತಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.