ತಿರುವನಂತಪುರ: ಕೇರಳದಲ್ಲಿ ಇಂದು 3021 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕೋಝಿಕ್ಕೋಡ್ 481, ಮಲಪ್ಪುರಂ 406, ಎರ್ನಾಕುಳಂ 382, ತ್ರಿಶೂರ್ 281, ಕೊಟ್ಟಾಯಂ 263, ಆಲಪ್ಪುಳ 230, ತಿರುವನಂತಪುರ 222, ಕೊಲ್ಲಂ 183, ಪಾಲಕ್ಕಾಡ್ 135, ಕಣ್ಣೂರು 133, ಪತ್ತನಂತಿಟ್ಟು 110, ಇಡುಕ್ಕಿ 89, ವಯನಾಡ್ 79, ಕಾಸರಗೋಡು 27 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕೋವಿಡ್ ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ 2 ಮಂದಿಯಲ್ಲಿ ದೃಢಪಡಿಸಲಾಗಿದೆ. ಇದರೊಂದಿಗೆ, ಇತ್ತೀಚೆಗೆ ಯುಕೆ ಯಿಂದ ಬಂದ 39 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಅವರ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎನ್‍ಐವಿ ಪುಣೆಗೆ ಕಳುಹಿಸಲಾಗಿದೆ. ಅವುಗಳಲ್ಲಿ 12 ಮಂದಿಗಳ ಪರೀಕ್ಷಾ ಫಲ ಲಭ್ಯವಾಗಿದ್ದು ಜೆನೆಟಿಕ್ ಮಾರ್ಪಾಡುಗೊಂಡ ವೈರಸ್ ಪತ್ತೆಯಾಗಿಲ್ಲ.
ಕಳೆದ 24 ಗಂಟೆಗಳಲ್ಲಿ 33,508 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.9.02.ರಷ್ಟಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 80,99,621 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 19 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 3160 ಕ್ಕೆ ಏರಿಕೆ ಕಂಡಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 52 ಜನರು ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 2643 ಜನರಿಗೆ ಸೋಂಕು ತಗುಲಿತು. 284 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 456, ಮಲಪ್ಪುರಂ 378, ಎರ್ನಾಕುಳಂ 350, ತ್ರಿಶೂರ್ 273, ಕೊಟ್ಟಾಯಂ 225, ಆಲಪ್ಪುಳ 226, ತಿರುವನಂತಪುರ 143, ಕೊಲ್ಲಂ 177, ಪಾಲಕ್ಕಾಡ್ 51, ಕಣ್ಣೂರು 98, ಪತ್ತನಂತಿಟ್ಟು 88, ಇಡುಕ್ಕಿ 77, ವಯನಾಡ್ 75, ಕಾಸರಗೋಡು 26 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.
42 ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 12, ತಿರುವನಂತಪುರಂ 10, ಎರ್ನಾಕುಳಂ 6, ತ್ರಿಶೂರ್, ಕೋಝಿಕ್ಕೋಡ್ ತಲಾ 3, ಕೊಲ್ಲಂ, ಪತ್ತನಂತಿಟ್ಟು ತಲಾ 2, ಕೊಟ್ಟಾಯಂ, ಪಾಲಕ್ಕಾಡ್, ಮಲಪ್ಪುರಂ ಮತ್ತು ವಯನಾಡ್ ತಲಾ 1.
ಸೋಂಕು ಪತ್ತೆಯಾದ 5145 ರೋಗಿಗಳ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ 271, ಕೊಲ್ಲಂ 273, ಪತ್ತನಂತಿಟ್ಟು 400, ಆಲಪ್ಪುಳ 240, ಕೊಟ್ಟಾಯಂ 800, ಇಡುಕ್ಕಿ 28, ಎರ್ನಾಕುಳಂ 749, ತ್ರಿಶೂರ್ 677, ಪಾಲಕ್ಕಾಡ್ 258, ಮಲಪ್ಪುರಂ 522, ಕೋಝಿಕ್ಕೋಡ್ 373, ವಯನಾಡ್ 151, ಕಣ್ಣೂರು 246, ಕಾಸರಗೋಡು 157 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 63,135 ಜನರಿಗೆ ಈ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 7,12,389 ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,32,135 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,20,699 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 11,436 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1277 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಹೊಸ ಹಾಟ್ ಸ್ಪಾಟ್ ಇದೆ. ಹೊಸ ಹಾಟ್‍ಸ್ಪಾಟ್ ತ್ರಿಶೂರ್ ಜಿಲ್ಲೆಯ ಚೆಲಕ್ಕರ (ಕಂಟೋನ್ಮೆಂಟ್ ವಲಯ ಉಪ ವಾರ್ಡ್ 4). ಇಂದು 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಇದರೊಂದಿಗೆ, ಪ್ರಸ್ತುತ ಒಟ್ಟು 447 ಹಾಟ್‍ಸ್ಪಾಟ್‍ಗಳಿವೆ.