ಕೊಚ್ಚಿ: ಅಲುವಾ-ತೈಕುಡಂ ಮಾರ್ಗ ವಿಸ್ತರಣೆಯೊಂದಿಗೆ ಕೊಚ್ಚಿ ಮೆಟ್ರೊಗೆ ಪ್ರಯಾಣಿಕರು ಆಕರ್ಷಿತರಾಗುವರೆಂದು ನಿರೀಕ್ಷಿಸಲಾಗಿತ್ತು. ಲಾಕ್ ಡೌನ್‍ಗೆ ಮೊದಲು, ಸರಾಸರಿ 65,000 ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದರು. ಆದರೆ ಈಗ ಸರಾಸರಿ ಪ್ರಯಾಣಕ್ಕಾಗಿ ಕೇವಲ 24,000 ಜನರು ಮಾತ್ರ ಕೊಚ್ಚಿ ಮೆಟ್ರೋವನ್ನು ಅವಲಂಬಿಸಿದ್ದಾರೆ. ಕಳೆದ ವರ್ಷದ ವಾರ್ಷಿಕ ವರದಿಯ ಪ್ರಕಾರ,ವಾರ್ಷಿಕವಾಗಿ ನಷ್ಟ 310 ಕೋಟಿ ರೂ. ಮತ್ತು ದಿನಕ್ಕೆ 85 ಲಕ್ಷ ರೂ.ನಷ್ಟದಿಂದ ಮೆಟ್ರೋ ನಲುಗುವಂತಾಗಿದೆ.
ಲಾಕ್ ಡೌನ್ ನಿಂದಾಗಿ ಮೆಟ್ರೊ ಸೇವೆಯ ಐದು ತಿಂಗಳ ನಷ್ಟ ಇನ್ನೂ ಬರಬೇಕಿದೆ. 2019-20ರ ವರದಿಯಲ್ಲಿ ಲಾಕ್ ಡೌನ್‍ನಲ್ಲಿ ಕೇವಲ 21 ದಿನಗಳಿವೆ. ನಷ್ಟವು 2018-19ಕ್ಕಿಂತ 25 ಕೋಟಿ ರೂ. ಟಿಕೆಟ್ ರಹಿತ ಆದಾಯವು 2019 ಕ್ಕೆ ಹೋಲಿಸಿದರೆ 2020 ರಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.
2018-19ರಲ್ಲಿ ಟಿಕೆಟ್ ರಹಿತ ಆದಾಯ 104.48 ಕೋಟಿ ರೂ. ಇದು 2019-20ರಲ್ಲಿ 134.95 ಕೋಟಿ ರೂ.ಗೆ ಏರಿದೆ. 56.93 ಕೋಟಿ. ರೂ.ಹೆಚ್ಚಳ ಉಂಟಾಗಿದೆ. ಲಾಕ್ ಡೌನ್ ಸಮಯದಲ್ಲಿ ಸರಾಸರಿ ಮಾಸಿಕ ಆದಾಯ ಕೇವಲ 2.41 ಕೋಟಿ ರೂ. ಆಗಿದ್ದರೆ ವೆಚ್ಚ 9.96 ಕೋಟಿ ರೂ.ಆಗಿತ್ತು. ಎಎಫ್‍ಡಿ ಸಾಲ 1260 ಕೋಟಿ ರೂ. ಇದ್ದು ಕೆನರಾ ಬ್ಯಾಂಕಿನಿಂದ ಪಡೆದ ಸಾಲ 1170 ಕೋಟಿ ರೂ. ಪಾವತಿಸಲು ಬಾಕಿಯಿದೆ.