ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5 ಲಕ್ಷ 70 ಸಾವಿರ ಮಂದಿಗೆ ಕೋವಿಡ್ ಲಸಿಕೆ ನೀಡಿದ್ದು ಇದುವರೆಗೂ ಒಟ್ಟು 35 ಲಕ್ಷಕ್ಕಿಂತಲೂ ಅಧಿಕ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
35,00,027 ಫಲಾನುಭವಿಗಳಲ್ಲಿ ಅತಿ ಹೆಚ್ಚು 4,63,793 ಜನರಿಗೆ ಉತ್ತರ ಪ್ರದೇಶದಲ್ಲಿ ಲಸಿಕೆ ನೀಡಲಾಗಿದ್ದು, ನಂತರದ ಸ್ಥಾನದಲ್ಲಿ ರಾಜಸ್ಥಾನ 3,24,973, ಕರ್ನಾಟಕ 3,07,891 ಮತ್ತು ಮಹಾರಾಷ್ಟ್ರದಲ್ಲಿ 2,61,320 ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 10,809 ಸೆಷನ್‍ಗಳಲ್ಲಿ 5,71,974 ಜನರಿಗೆ ಲಸಿಕೆ ನೀಡಲಾಗಿದ್ದು, ಈವರೆಗೆ ಒಟ್ಟು 63,687 ಸೆಷನ್‍ಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಭಾರತದ ಒಟ್ಟು ಸಕ್ರಿಯ ಕೇಸ್ ಗಳಲ್ಲಿ 1.7 ಲಕ್ಷ (1,69,824) ಕ್ಕಿಂತ ಕಡಿಮೆಯಾಗಿದೆ, ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಕಾರಾತ್ಮಕ ಪ್ರಮಾಣವನ್ನು ಹೊಂದಿವೆ.
ಕೇರಳದಲ್ಲಿ ಅತಿ ಹೆಚ್ಚು ಸಕಾರಾತ್ಮಕ ಪ್ರಕರಣಗಳು ಶೇಕಡಾ 12.20 ರಷ್ಟಿದೆ, ನಂತರ ಛತ್ತೀಸ್ ಗಡದಲ್ಲಿ ಅಧಿಕ ಪ್ರಮಾಣದ ಕೊರೋನಾ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯ ತಿಳಿಸಿದೆ.