ಬದಿಯಡ್ಕ: ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೂತನ ಭೋಜನ ಶಾಲೆ ಹಾಗೂ ಸಭಾಭವನದ ಕಾಮಗಾರಿಗೆ ಎಸ್.ಜಿ.ಕೆ. ಫ್ರೆಂಡ್ಸ್ ಗಲ್ಫ್ ಕಮಿಟಿಯ ಸದಸ್ಯರು ರೂ. ಮೂರುಲಕ್ಷವನ್ನು ದೇಣಿಗೆಯಾಗಿ ನೀಡಿದರು.
ಮಕರ ಸಂಕ್ರಮಣ ಶುಭದಿನದಂದು ಶ್ರೀ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಿಗೆ ಮೊತ್ತವನ್ನು ಹಸ್ತಾಂತರಿಸಿದರು. ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವಿನಯ ರೈ ಪೆರಡಾಲ ಗುತ್ತು, ಶಾಶ್ವತ್ ರೈ ಅತಿಥಿಗಳಾಗಿ ಭಾಗವಹಿಸಿದ್ದರು. ಗಲ್ಫ್ ಸಮಿತಿಯ ಪರವಾಗಿ ಗಿರೀಶ್ ಪಿ.ಕೆ., ಶೋಭಿತ್ ಮಾರ್ಪನಡ್ಕ, ಕೃಷ್ಣ ಮಣಿಯಾಣಿ ಮಾರ್ಪನಡ್ಕ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಬು ಮಣಿಯಾಣಿ ಜಯನಗರ, ಕುಂಞÂ ರಾಮ ಮಣಿಯಾಣಿ ಪದ್ಮಾರು, ಅಚ್ಚುತ ಮಾಸ್ತರ್ ಅಗಲ್ಪಾಡಿ, ರಮೇಶ್ ಕೃಷ್ಣ ಪದ್ಮಾರು, ಸುಶೀಲ ಪದ್ಮಾರು, ಲೀಲಾವತಿ ಅಗಲ್ಪಾಡಿ, ವೇದಾಂತ್ ಪದ್ಮಾರು, ರವೀಂದ್ರ ಜಯನಗರ, ಬಾಲಕೃಷ್ಣ ಮಣಿಯಾಣಿ ನಾರಂಪಾಡಿ, ಗುರುಪ್ರಸಾದ್ ಪದ್ಮಾರು, ಯತೀಶ್ ಮಾರ್ಪನಡ್ಕ, ಚಂದ್ರ ಪದ್ಮಾರು, ನಾರಾಯಣ ಪದ್ಮಾರು, ಜಯಪ್ರಕಾಶ್ ಬೆದ್ರುಕೂಡ್ಲು, ರಕ್ಷಿತ್ ಅಗಲ್ಪಾಡಿ, ವೇಣು ನಾರಂಪಾಡಿ, ಶಿವರಾಮ ಪದ್ಮಾರು, ಸತ್ಯನಾರಾಯಣ ಅಗಲ್ಪಾಡಿ ಪಾಲ್ಗೊಂಡಿದ್ದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಶ್ರೀಧರ ಪದ್ಮಾರು ವಂದಿಸಿದರು. ಎಸ್.ಜಿ.ಕೆ. ಗಲ್ಫ್ ಸಮಿತಿಯ ಅಧ್ಯಕ್ಷ ಸುರೇಶ್ ಪ್ರಸಾದ್ ಅಗಲ್ಪಾಡಿ ಹಾಗೂ ಕಾರ್ಯದರ್ಶಿ ಮಿಥುನ್ ರಾಜ್ ಮಾರ್ಪನಡ್ಕ ನೇತೃತ್ವ ವಹಿಸಿದ್ದರು.