ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 ಟೀಸರ್ ಯೂಟ್ಯೂಬ್ ಶೇಕ್ ಮಾಡಿದ್ದು, ಬಿಡುಗಡೆಯಾದ 46 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ.
ಗುರುವಾರ ರಾತ್ರಿ 9-29ಕ್ಕೆ ಬಿಡುಗಡೆಯಾದ ಈ ಟೀಸರ್ ಇಲ್ಲಿಯವರೆಗೂ 55 ಲಕ್ಷ ಲೈಕ್, 4.40 ಲಕ್ಷ ಕಾಮೆಂಟ್ ಗಳೊಂದಿಗೆ 10 ಕೋಟಿ ವೀಕ್ಷಣೆಯನ್ನು ಪಡೆದುಕೊಂಡಿದೆ.
ಯೂ ಟ್ಯೂಬ್ ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ತಮಿಳಿನ ಮಾಸ್ಟರ್, ಹಾಲಿವುಡ್ ನ ಅವೆಂಜರ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮುರಿದು 100 ಮಿಲಿಯನ್ ವೀಕ್ಷಣೆ ಕಂಡಿದೆ. ಟೀಸರ್ ಗೆ ಸ್ಯಾಂಡಲ್ ವುಡ್ ಸೇರಿದಂತೆ ದೇಶ, ವಿದೇಶದ ಚಿತ್ರೋದ್ಯಮದ ಗಣ್ಯರಿಂದ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.