ಬೆಂಗಳೂರು: 2021-22ನೇ ಸಾಲಿನ ಕರ್ನಾಟಕ ರಾಜ್ಯ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು, ಎಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅಕ್ಟೋಬರ್ 4ರಿಂದ ಆರಂಭವಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪ್ರಕಟಿಸಿದ ಅವರು,ಕೋವಿಡ್ ಕಾರಣದಿಂದ 2021-22ನೇ ಸಾಲಿನ ಶೈಕ್ಷಣಿಕ ಚಟವಟಿಕೆಗಳ ಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ಆ ಎಲ್ಲ ಅಂಶಗಳನ್ನು ಪರಿಗಣಿಸಿ ಶೈಕ್ಷಣಿಕ ಕ್ಯಾಲೆಂಡರ್ ನ ಕರಡು ರೂಪಿ ಸಲಾಗಿದೆ ಎಂದರು.
2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಹೀಗಿದೆ : ಪದವಿ ತರಗತಿಗಳು : ಪದವಿ ವಿಭಾಗದ 5ನೇ ಸೆಮಿಸ್ಟರ್ ತರಗತಿಗಳು ಫೆಬ್ರವರಿ 28ರಂದು ಮುಗಿಯಲಿದ್ದು, ಪರೀಕ್ಷೆಗಳು 2021 ಮಾರ್ಚ್ 31ರಂದು ಮುಗಿಯಲಿವೆ.1 ಮತ್ತು 3ನೇ ಸೆಮಿಸ್ಟರ್ ತರಗತಿಗಳು 2021ರ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು,ಪರೀಕ್ಷೆಗಳು 2021 ಏಪ್ರಿಲ್ 30 ರಂದು ಆರಂಭವಾಗಲಿವೆ.
6ನೇ ಸೆಮಿಸ್ಟರ್ ತರಗತಿಗಳು 2021 ಏಪ್ರಿಲ್ 1ರಂದು ಶುರುವಾಗಿ,2021ರ ಜುಲೈ 31ಕ್ಕೆ ಮುಗಿಯುತ್ತವೆ.6ನೇ ಸೆಮಿಸ್ಟರ್ ಪರೀಕ್ಷೆಗಳು 2021ಅಗಸ್ಟ್ 31 ಕ್ಕೆ ಮುಗಿಯುತ್ತವೆ. ಈ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವು 2021 ಸೆಪ್ಟೆಂಬರ್ 10ರಂದು ಪ್ರಕಟವಾಗಲಿದೆ. 2 ಮತ್ತು 4ನೇ ಸೆಮಿಸ್ಟರ್ ತರಗತಿಗಳು 2021 ಮೇ 2ಕ್ಕೆ ಶುರುವಾಗಿ 2021 ಅಗಸ್ಟ್ 31ಕ್ಕೆ ಮುಕ್ತಾಯವಾಗುತ್ತವೆ.ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಸೆಪ್ಟೆಂಬರ್ 30ಕ್ಕೆ ಮುಗಿಯುತ್ತವೆ.