ತಿರುವನಂತಪುರ: 2021 ರ ಜನವರಿಯಿಂದ ಮಾರ್ಚ್ 21 ರವರೆಗೆ ಚಿತ್ರಮಂದಿರಗಳ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ಮುಚ್ಚಿದ ಹತ್ತು ತಿಂಗಳಲ್ಲಿ ವಿದ್ಯುತ್‍ಗೆ ನಿಗದಿತ ಶುಲ್ಕವನ್ನು ಶೇಕಡಾ 50 ರಷ್ಟು ಕಡಿಮೆಗೊಳಿಸಲಾಗಿದೆ. ಉಳಿದ ಹಣವನ್ನು ಕಂತುಗಳಲ್ಲಿ ಪಾವತಿಸಲು ಅನುಮತಿಸಲಾಗುವುದು. ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾದ ಆಸ್ತಿ ತೆರಿಗೆಯನ್ನು ಚಿತ್ರಮಂದಿರಗಳು ಮಾರ್ಚ್ 31, 2020 ರೊಳಗೆ ಕಂತುಗಳಲ್ಲಿ ಪಾವತಿಸಬಹುದು.
ವೃತ್ತಿಪರ ತೆರಿಗೆಯನ್ನು ರಾಜ್ಯ ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ. ಸ್ಥಳೀಯ ಸರ್ಕಾರ, ವಿದ್ಯುತ್ ತಪಾಸಣೆ, ಚಲನಚಿತ್ರ ವಿಭಾಗ, ಕಟ್ಟಡ ಸಾಮಥ್ರ್ಯ, ಆರೋಗ್ಯ ಮತ್ತು ಅಗ್ನಿಶಾಮಕ ದಳಕ್ಕೆ ಸಂಬಂಧಿಸಿದ ವಿವಿಧ ಪರವಾನಗಿಗಳ ಮಾನ್ಯತೆಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲು ನಿರ್ಧರಿಸಿದೆ.
ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅಧಿಕಾರಿಗಳು ವಿವಿಧ ವಿಷಯಗಳ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಿದ್ಯುತ್ ಸಚಿವ ಎಂ.ಎಂ.ಮಣಿ, ಸ್ಥಳೀಯಾಡಳಿತ ಸಚಿವ ಎ.ಸಿ.ಮೊಯ್ದೀನ್ ಮತ್ತು ಕೆ.ಎಸ್.ಇ.ಬಿ ಅಧ್ಯಕ್ಷ ಎನ್.ಎಸ್.ಪಿಳ್ಳೆ ಮೊದಲಾದವರು ಉಪಸ್ಥಿತರಿದ್ದರು.