HEALTH TIPS

ರಾಜ್ಯದಲ್ಲಿ ಇಂದು 5490 ಮಂದಿಗೆ ಕೋವಿಡ್- 67,712 ಮಾದರಿಗಳ ಪರೀಕ್ಷೆ-ಕಾಸರಗೋಡು_72 ಮಂದಿಗೆ ಸೋಂಕು ದೃಢ

                      

             ತಿರುವನಂತಪುರ: ಕೇರಳದಲ್ಲಿ ಇಂದು 5490 ಜನರಿಗೆ ಕೋವಿಡ್ ಖಚಿತವಾಗಿದೆ. ಮಲಪ್ಪುರಂ 712, ಎರ್ನಾಕುಳಂ 659, ಕೋಝಿಕ್ಕೋಡ್ 582, ಪತ್ತನಂತಿಟ್ಟು 579, ಕೊಲ್ಲಂ 463, ಕೊಟ್ಟಾಯಂ 459, ತ್ರಿಶೂರ್ 446, ಆಲಪ್ಪುಳ 347, ತಿರುವನಂತಪುರ 295, ಕಣ್ಣೂರು 235, ವಯನಾಡ್ 229,ಪಾಲಕ್ಕಾಡ್ 210, ಇಡುಕ್ಕಿ 202, ಕಾಸರಗೋಡು 72 ಎಂಬಂತೆ ಸೋಂಕು ಬಾಧಿಸಿದೆ. 

                       ಸೋಂಕು ಮುಕ್ತರಾದವರ ವಿವರ: 

    ಸೋಂಕು ಪತ್ತೆಯಾದ 4337 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 296, ಕೊಲ್ಲಂ 263, ಪತ್ತನಂತಿಟ್ಟು 317, ಆಲಪ್ಪುಳ 485, ಕೊಟ್ಟಾಯಂ 429, ಇಡುಕಿ 41, ಎರ್ನಾಕುಳಂ 599, ತ್ರಿಶೂರ್ 402, ಪಾಲಕ್ಕಾಡ್ 194, ಮಲಪ್ಪುರಂ 395, ಕೊಝುಕ್ಕೋಡ್ 482, ವಯನಾಡ್ 171, ಕಣ್ಣೂರು 195, ಕಾಸರಗೋಡು 68 ಮಂದಿ ಗುಣಮುಖರಾಗಿದ್ದಾರೆ. 

                       19 ಮಂದಿ ಕೋವಿಡ್ ಬಾಧಿಸಿ ಮೃತ್ಯು: 

         ಕಳೆದ 24 ಗಂಟೆಗಳಲ್ಲಿ 19 ಮಂದಿ ಕೋವಿಡ್ ಬಾಧಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 3392 ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 66,503 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7,61,154 ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

     ಸಂಪರ್ಕದ ಪ್ರಕರಣಗಳು:

  ಇಂದು, ರೋಗ ಪತ್ತೆಯಾದವರಲ್ಲಿ 92 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 4911 ಮಂದಿ ಜನರಿಗೆ ಸೋಂಕು ತಗುಲಿತು. 435 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 681, ಎರ್ನಾಕುಳಂ 605, ಕೋಝಿಕ್ಕೋಡ್ 549, ಪತ್ತನಂತಿಟ್ಟು 490, ಕೊಲ್ಲಂ 454, ಕೊಟ್ಟಾಯಂ 418, ತ್ರಿಶೂರ್ 432, ಆಲಪ್ಪುಳ 343, ತಿರುವನಂತಪುರ 203, ಕಣ್ಣೂರು 192, ವಯನಾಡ್ 217, ಪಾಲಕ್ಕಾಡ್ 82, ಇಡುಕ್ಕಿ 179, ಕಾಸರಗೋಡು 66 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದವರಾಗಿದ್ದಾರೆ.

     ಮೂವರಿಗೆ ರೂಪಾಂತರಿ ವೈರಸ್: 

    ಮಾರ್ಪಡಿಸಲ್ಪಟ್ಟ ಜೆನೆಟಿಕ್ ಕಾರಣದ  ವೈರಸ್ ಯುಕೆ ಯಿಂದ ಬಂದ 3 ಜನರಲ್ಲಿ ದೃಢಪಟ್ಟಿದೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ಎಲ್ ಐ ವಿ ಪುಣೆಗೆ ಕಳುಹಿಸಲಾಗಿದೆ.  ಕಣ್ಣೂರು ಜಿಲ್ಲೆಯ 25 ಮತ್ತು 27 ವರ್ಷ ವಯಸ್ಸಿನ ಇಬ್ಬರು ಹಾಗೂ ಪತ್ತನಂತಿಟ್ಟು ಜಿಲ್ಲೆಯ 52 ವರ್ಷದ ವ್ಯಕ್ತಿಯಲ್ಲಿ ಈ ವೈರಸ್ ದೃಢಪಟ್ಟಿದೆ. ಇವರೆಲ್ಲರೂ ಪುರುಷರು. ಇದರೊಂದಿಗೆ, ಒಟ್ಟು 9 ಜನರಲ್ಲಿ ರೂಪಾಂತರಿತ ವೈರಸ್ ಪತ್ತೆಯಾಗಿದೆ.

            ದೇಶದಲ್ಲಿ ಕೋವಿಡ್ ಪ್ರಕರಣಗಳು

     ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,05,12,093 ರಷ್ಟಿದೆ. ದೇಶದಲ್ಲಿ ಪ್ರಸ್ತುತ 2,13,603 ಸಕ್ರಿಯ ರೋಗಿಗಳಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ 1,01,46,763 ಜನರನ್ನು ಗುಣಪಡಿಸಲಾಗಿದೆ. ನಿನ್ನೆ ಆಸ್ಪತ್ರೆಯಿಂದ 17,652 ಜನರನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ 1,51,727 ಜನರು ಪ್ರಾಣ ಕಳೆದುಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries