ತಿರುವನಂತಪುರ: ಯುಕೆ ಯಿಂದ ಕೇರಳಕ್ಕೆ ಆಗಮಿಸಿದ ಆರು ಜನರಿಗೆ ಕೋವಿಡ್‍ನ ಹೊಸ ರೂಪಾಂತರವನ್ನು ಖಚಿತಪಡಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ. ನಿನ್ನೆ ಸಂಜೆಯ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಆರೋಗ್ಯ ಸಚಿವೆ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 29 ವಿದೇಶಿಯರ ಮಾದರಿಗಳನ್ನು ಪುಣೆ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು ಮತ್ತು ಅವರಲ್ಲಿ ಆರು ಮಂದಿ ಧನಾತ್ಮಕ ವರದಿ ದೃಢಪಟ್ಟಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೋಝಿಕ್ಕೋಡ್ ಮತ್ತು ಆಲಪ್ಪುಳದಲ್ಲಿ, ಪ್ರತಿ ಕುಟುಂಬಕ್ಕೆ ಇಬ್ಬರು ವ್ಯಕ್ತಿಗಳಿಗೆ ತೀವ್ರ ಕೋವಿಡ್ ದೃಢಪಟ್ಟಿದೆ. ಕೊಟ್ಟಾಯಂ ಮತ್ತು ಕಣ್ಣೂರಿನಲ್ಲಿ ಹೊಸ ವೈರಸ್ ಪ್ರಕರಣಗಳು ದೃಢಪಟ್ಟಿದೆ. ಆರೋಗ್ಯ ಇಲಾಖೆ ಆಸ್ಪತ್ರೆಗಳ ಮೇಲೆ ನಿಗಾ ಇರಿಸಿದೆ ಮತ್ತು ಸಂಪರ್ಕದಲ್ಲಿರುವವರನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇತರರಿಗೆ ಹರಡುವ ಅಪಾಯ ತುಂಬಾ ಹೆಚ್ಚಿರುವುದರಿಂದ ಜನರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವೆ ಮುನ್ಸೂಚನೆ ನೀಡಿರುವರು. ವಿದೇಶದಿಂದ ಬಂದವರು ಆರೋಗ್ಯ ಇಲಾಖೆಗೆ ಹೃದಯ ವೈಶಾಲ್ಯರಾಗಿ ಮಾಹಿತಿ ನೀಡಲು ಸಿದ್ಧರಿರಬೇಕು ಎಂದರು.
ವಿದೇಶದಿಂದ ಬರುವವರ ಮೇಲೆ ನಿಗಾ ಇಡಲು ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ವಿದೇಶದಿಂದ ಬರುವ ಜನರನ್ನು ಹುಡುಕಲು ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದರು.
ಯುಕೆಯಲ್ಲಿ ಹೆಚ್ಚು ಅಪಾಯಕಾರಿಯಾದ ವೈರಸ್ ವರದಿಯಾದ ಹಿನ್ನೆಲೆಯಲ್ಲಿ ದೇಶವು ವಿದೇಶಿ ವಲಸಿಗರ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಹೊಸ ಕೋವಿಡ್ ರೂಪಾಂತರವು ರೋಗದ ತೀವ್ರತೆಯನ್ನು ಹೆಚ್ಚಿಸದಿದ್ದರೂ, ರೋಗವನ್ನು ಇತರರಿಗೆ ಹರಡಲು ಇದು ಶೇಕಡಾ 70 ರಷ್ಟು ಅವಕಾಶವನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ರೋಗಿಗಳ ಸಂಖ್ಯೆ ಏರಿದರೆ, ಅದು ಮರಣದ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಆತಂಕವಿದೆ.