ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಐತಿಹಾಸಿಕ ಅಭಿಯಾನ ಆರಂಭವಾಗಿ 7 ದಿನ ಕಳೆದಿದ್ದು, ಗುರುವಾರ ಸಂಜೆ 6 ಗಂಟೆಯವರೆಗೂ ಒಟ್ಟು 10.43 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಮೂಲಕ ಭಾರತ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ಹಿಂದಿಕ್ಕಿ ದಾಖಲೆ ಬರೆದಿದೆ. ಅಮೆರಿಕಾ ಮತ್ತು ಇಸ್ರೇಲ್ 10 ಲಕ್ಷ ಜನರಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿದ್ದವು.
ಲಸಿಕೆ ಅಭಿಯಾನ ಆರಂಭವಾದ ದಿನ 2,07,229 ಮಂದಿ ಲಸಿಕೆ ಪಡೆದಿದ್ದರು. ನಂತರ ಭಾನುವಾರ 17,072 ಮಂದಿ, ಸೋಮವಾರ 1.48 ಲಕ್ಷ ಬುಧವಾರ 1.12 ಲಕ್ಷ ಜನರು ಲಸಿಕೆ ಪಡೆದೆಕೊಂಡಿದ್ದರು.
ಇದರೊಂದಿಗೆ ಶುಕ್ರವಾರದವರೆಗೆ 10,43,534 ಮಂದಿಗೆ ಲಸಿಕೆ ನೀಡಲಾಗಿದೆ ಸಚಿವಾಲಯ ತಿಳಿಸಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವ ದಾಖಲೆ ಬರೆದಿದೆ.