ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಕೇರಳ(ಸವಾಕ್) ಕಾಸರಗೋಡು ಜಿಲ್ಲಾ ಸಮಿತಿ ಸಭೆ ಭಾನುವಾರ ಪಾರೆಕಟ್ಟೆಯ ರಂಗಕುಟೀರದಲ್ಲಿ ನಡೆಯಿತು.
ಸವಾಕ್ ಜಿಲ್ಲಾಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಂಜೇಶ್ವರ ಪಂಚಾಯತಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ಸವಾಕ್ ನ ಮಂಜೇಶ್ವರ ಬ್ಲಾಕ್ ಅಧ್ಯಕ್ಷೆ ಜೀನ್ ಲವೀನೊ ಮೊಂತೆರೋ ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಕೇರಳ ಜಾನಪದ ಅಕಾಡೆಮಿಯ ಪ್ರಶಸ್ತಿ ಪಡೆದ ದೈವ ನರ್ತಕ ಐತಪ್ಪ ವರ್ಕಾಡಿ ಅವರನ್ನೂ ಈ ಸಂದರ್ಭ ಗೌರವಿಸಲಾಯಿತು. ವಿದೇಶದಲ್ಲಿ ಹಲವು ವರ್ಷಗಳ ಕಾಲ ಕಲಾವಿದರಾಗಿ ದುಡಿದ ಮೊಹಮ್ಮದ್ ಕುಂಞ ಅವರನ್ನು ಸನ್ಮಾನಿಸಲಾಯಿತು.
ಫೆಬ್ರವರಿ 7ರಂದು ಕಾಸರಗೋಡಿನಲ್ಲಿ ಸವಾಕ್ ಜಿಲ್ಲಾ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಕೇರಳ ಸಾಂಸ್ಕøತಿಕ ಕ್ಷೇಮನಿಧಿ ಬೋರ್ಡ್ ನಲ್ಲಿ ಸದಸ್ಯರಾಗಲು ಎಲ್ಲಾ ಕಲಾವಿದರನ್ನು ಆಹ್ವಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಬಾಸುಮ ಕೊಡಗು ಹಾಗೂ ಡಾ.ಜಗದೀಶ್ ಜೋಗಿ ಇವರು ಸವಾಕ್ ಸದಸ್ಯರಿಗೆ ಸ್ವಉದ್ಯೋಗ ಮತ್ತು ಆರ್ಥಿಕ ಕೌಶಲ್ಯದ ಬಗ್ಗೆ ತರಬೇತಿ ನಡೆಸಿಕೊಟ್ಟರು.
ಸಭೆಯಲ್ಲಿ ಸವಾಕ್ ಕಾರಡ್ಕ ಬ್ಲಾಕ್ ಅಧ್ಯಕ್ಷ ಮಧುಸೂದನ ಬಳ್ಳಾಲ್, ಸುರೇಶ್ ಬೇಕಲ್, ದಯಾ ಪಿಲಿಕುಂಜೆ, ನರಸಿಂಹ ಬಲ್ಲಾಳ್, ಭಾರತಿ ಬಾಬು, ಜಯಂತಿ ಸುವರ್ಣ, ವಾಸು ಬಾಯಾರ್, ಹರಿಕಾಂತ್, ನರೇಂದ್ರ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಸ್ವಾಗತಿಸಿ, ಕೋಶಾಧಿಕಾರಿ ಚಂದ್ರಹಾಸ ಕಯ್ಯಾರ್ ವಂದಿಸಿದರು.