HEALTH TIPS

ಬಾಟಲ್ ಕಲೆಯಲ್ಲಿ ವಿಶ್ವದ 7 ಅದ್ಭುತಗಳು: ಕೇರಳ ಮಹಿಳೆಯ ಸಾಧನೆ ಏಷ್ಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ!

      ಕೊಚ್ಚಿ: ಉತ್ಸಾಹದಿಂದ ಕನಸುಗಳನ್ನು ಬೆನ್ನಟ್ಟುವುದು ಖ್ಯಾತಿಯ ಶಿಖರಕ್ಕೇರಿಸುತ್ತದೆ. ಅಂಥಹದ್ದೇ ಉದಾಹರಣೆಯಾಗಿದ್ದಾರೆ ಕೇರಳದ ಮಹಿಳೆ ಜಿಸ್ನಾ ನಗಿರ್ಶಾ (40) ಬಾಟಲ್ ಆರ್ಟ್ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ. 

       "ನಾನು 6 ವರ್ಷಗಳಿಂದ ಬಾಟಲ್ ಆರ್ಟ್ ಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ, ಕಳೆದ 2 ವರ್ಷಗಳಿಂದಷ್ಟೇ ಅದರೆಡೆಗೆ ತೀವ್ರವಾಗಿ ಕೆಲಸ ಮಾಡುತ್ತಿದ್ದೇನೆ, ಈಗ ವಿಶ್ವದ 7 ಅದ್ಭುತಗಳನ್ನು ಬಾಟಲ್ ಆರ್ಟ್ ನಲ್ಲಿ ತೋರಿಸಿರುವ ಕಲೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ ಎನ್ನುತ್ತಾರೆ ಜಿಸ್ನಾ ನಗಿರ್ಶಾ 

        ಜೇಡಿಮಣ್ಣು, ಅಂಟು, ವಾರ್ನಿಷ್ ಮತ್ತು ಬಣ್ಣವನ್ನು ಬಳಕೆ ಮಾಡಿ ವಿಶ್ವದ 7 ಅದ್ಭುತಗಳನ್ನು ಬಾಟಲ್ ಆರ್ಟ್ ನಲ್ಲಿ ತೋರಿಸಿದ್ದು, ಇದಕ್ಕಾಗಿ ಅತಿ ಹೆಚ್ಚು ತಾಳ್ಮೆ ವಹಿಸಿದ್ದೆ ಎಂದು ಜಿಸ್ನಾ ಹೇಳಿದ್ದಾರೆ.

      ಹಾಗೆಂದು ಕೇರಳದ ಈ ಸಾಧಕಿಗೆ ಇಷ್ಟಕ್ಕೆ ಸಮಾಧಾನವಿಲ್ಲ. ತಮ್ಮ ಕಲೆ ಲಿಮ್ಕಾ ಬುಕ್ ದಾಖಲೆಯನ್ನು ಸೇರಬೇಕೆಂಬ ಹೆಬ್ಬಯಕೆ ಹೊಂದಿದ್ದು, ಅದನ್ನು ಈಡೇರಿಸುವ ಕನಸು ಹೊಂದಿದ್ದಾರೆ. 

       ನನ್ನ ಕೆಲಸಗಳ ವಿವರಗಳನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳಿಸಿಕೊಡುವ ಪ್ರಕ್ರಿಯೆಯಲ್ಲಿದ್ದೇನೆ ಎನ್ನುತ್ತಾರೆ ಜಿಸ್ನಾ.ಬಾಟಲ್ ಆರ್ಟ್ ನ ವಿನ್ಯಾಸಗಳು ಬಾಟಲ್ ಗಳ ಆಕಾರವನ್ನು ಆಧರಿಸಿರುತ್ತದೆ, ಈ ರೀತಿಯ ಬಾಟಲ್ ಕಲೆಗಳು 1,000 ರೂಪಾಯಿಗಳಿಂದ ಲಭ್ಯವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries