ಕಾಸರಗೋಡು: ಲೈಫ್ ಮಿಷನ್ ಯೋಜನೆ ಮೂಲಕ ವಿವಿಧ ವಿಭಾಗಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು ಪೂರ್ತಿಗೊಂಡಿರುವುದು 8605 ಮನೆಗಳು.
ಮನೆಯಿಲ್ಲದವರಿಗೆ ಮತ್ತು ಸ್ವಂತ ಜಾಗವಿಲ್ಲದವರಿಗೆ ಮನೆ ಎಂಬ ಕನಸು ನನಸಾಗಿಸುವಲ್ಲಿ ರಾಜ್ಯ ಸರಕಾರದ ಈ ಯೋಜನೆ ಪೂರಕವಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು ಶೇ 87.02 ಮನೆಗಳು ಪೂರ್ಣಗೊಂಡಿವೆ. ಅರ್ಹರಾಗಿರುವ 10377 ಫಲಾನುಭವಿಗಳಲ್ಲಿ 9889 ಮಂದಿ ಮನೆ ನಿರ್ಮಾಣ ಕರಾರಿಗೆ ಸಹಿ ಹಾಕಿದ್ದರು ಎಂದು ಜಿಲ್ಲಾ ಸಂಚಾಲಕ ಎಂ.ವತ್ಸಲನ್ ತಿಳಿಸಿದರು.
ಪ್ರಥಮ ಹಂತದಲ್ಲಿ 2874 ಮನೆಗಳು ಪೂರ್ಣ:
ಲೈಫ್ ಮಿಷನ್ ನ ಪ್ರಥಮ ಹಂತದಲ್ಲಿ ಈ ವರೆಗೆ ಒಟ್ಟು ಜಿಲ್ಲೆಯಲ್ಲಿ 2921 ಮನೆಗಳಲ್ಲಿ 2874 ಮನೆಗಳ ನಿರ್ಮಾಣ ಪೂರ್ತಿಗೊಂಡಿವೆ (ಶೇ 98.39). ಬ್ಲೋಕ್ ಪಂಚಾಯತ್ ನಲ್ಲಿ ಪೂರ್ತಿಗೊಳ್ಳಬೇಕಿದ್ದ 1500 ಮನೆಗಳಲ್ಲಿ 1486 ಮನೆಗಳ ನಿರ್ಮಾಣ, ನಗರಸಭೆ ಮಟ್ಟದಲ್ಲಿ 147 ಮನೆಗಳಲ್ಲಿ ಎಲ್ಲ ನಿವಾಸಗಳೂ ಪೂರ್ಣಗೊಂಡಿವೆ. ಪರಿಶಿಷ್ಟ ಜಾತಿ ಇಲಾಖೆ 56 ಮನೆಗಳಲ್ಲಿ ಎಲ್ಲ ಮನೆಗಳೂ ಪೂರ್ಣಗೊಳಿಸಿದೆ. ಪರಿಶಿಷ್ಟ ಪಂಗಡ ಇಲಾಖೆ 636 ಮನೆಗಳಲ್ಲಿ 618 ಮನೆಗಳನ್ನು ಪೂರ್ಣಗೊಳಿಸಿದೆ. ಅಲ್ಪಸಂಖ್ಯಾತರ ಇಲಾಖೆ 10 ಮನೆಗಳಲ್ಲಿ 6 ನಿವಾಸಗಳನ್ನು ಪೂರ್ಣಗೊಳಿಸಿದೆ. ಜಿಲ್ಲಾ ಪಂಚಾಯತ್ ಪೂರ್ತಿಗೊಳಿಸಬೇಕಿರುವ 51 ಮನೆಗಳಲ್ಲಿ ಎಲ್ಲ ನಿವಸಗಳೂ, ಗ್ರಾಮ ಪಂಚಾಯತ್ ಗಳು ಪೂರ್ಣಗೊಳಿಸಬೇಕಾದ 479 ಮನೆಗಳಲ್ಲಿ 473 ನಿವಾಸಗಳೂ ಈ ವರೆಗೆ ಪೂರ್ಣಗೊಂಡಿವೆ. ಸದ್ರಿ 47 ಮನೆಗಳ ನಿರ್ಮಾಣ ಪೂರ್ಣತೆಗೆ ಬಾಕಿಯಿದೆ.
ಎರಡನೇ ಹಂತದಲ್ಲಿ 3245 ಮನೆಗಳು ಪೂರ್ಣ:
ಲೈಫ್ ಮಿಷನ್ ಎರಡನೇ ಹಂತದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 3894 ಮಂದಿ ಫಲಾನುಭವಿಗಳಿದ್ದು, 3729 ಮಂದಿ ಕರಾರಿಗೆ ಸಹಿ ಹಾಕಿದ್ದಾರೆ. 3245 ಮಂದಿ ಫಲಾನುಭೌಇಗಳ ನಿವಾಸಗಳು ಪೂರ್ಣಗೊಂಡಿವೆ (ಶೇ 87.02). ಕರಾರಿನಲ್ಲಿ ಸೇರಿರುವ 146 ಮಂದಿಯ ವಸತಿ ನಿರ್ಮಾಣ ಆರಂಭಗೊಂಡಿಲ್ಲ. 338 ಮಂದಿಯ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬೇಸ್ ಮೆಂಟ್ ಪೂರ್ತಿಗೊಂಡಿರುವುದು 122, ಲಿಂಟಲ್ ಪೂರ್ತಿಗೊಂಡಿರುವುದು 125, ಮೇಲ್ಛಾವಣಿ ಪೂರ್ತಿಗೊಂಡಿರುವುದು 91.
ಮೂರನೇ ಹಂತದಲ್ಲಿ 674 ಮನೆಗಳು:
ಲೈಫ್ ಮಿಷನ್ ಯೋಜನೆಯ ತೃತೀಯ ಹಂತ ಜಾಗವೂ, ಮನೆಯೂ ಇಲ್ಲದವರಿಗೆ ಮನೆ ಒದಗಿಸುವ ಯೋಜನೆಯಾಗಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಅರ್ಹರಾಗಿರುವ 674 ಮಂದಿಯಲ್ಲಿ 560 ಮಂದಿ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಕರಾರಿಗೆ ಸಹಿ ಹಾಕಿದವರು. ಇವರಲ್ಲಿ 143 ಮಂದಿಯ ಮನೆ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. 365 ಮಂದಿಯ ನಿವಾಸ ನಿರ್ಮಾಣ ಪ್ರಗತಿಯಲ್ಲಿದೆ.
ಲೈಫ್-ಪಿ.ಎಂ.ಎ.ವೈ. ರೂರಲ್ ಯೋಜನೆಯಲ್ಲಿ ಕರಾರಿಗೆ ಸಹಿ ಹಾಕಿರುವ 583 ಫಲಾನುಭವಿಗಲಲ್ಲಿ 571 ಮಂದಿಯ ವಸತಿ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಲೈಫ್-ಪಿ.ಎಂ.ಎ.ವೈ. ಅರ್ಬನ್ ಯೋಜನೆಯಲ್ಲಿ ಅರ್ಹರಾದ 1820 ಫಲಾನುಭವಿಗಳಲ್ಲಿ 1611 ಮಂದಿ ಕರಾರಿಗೆ ಸಹಿ ಹಾಕಿದ್ದಾರೆ. ಇವರಲ್ಲಿ 1378 ಮನೆಗಳು ಪೂರ್ಣಗೊಂಡಿವೆ. 112 ಮನೆಗಳು ಮೇಲ್ಛಾವಣಿ ವರೆಗೆ, 59 ಮನೆಗಳು ಲಿಂಟಲ್ ವರೆಗೆ, 62 ಮನೆಗಳು ಬೇಸ್ ಮೆಂಟ್ ವರೆಗೆ ನಿರ್ಮಾಣ ನಡೆದಿವೆ.
ಪರಿಶಿಷ್ಟ ಜಾತಿ-ಪಂಗಡ, ಮೀನುಗಾರಿಕೆ ಇಲಾಕೆಗಳ ಮುಖಾಂತರ ಯಥಾ ಕ್ರಮ 399, 16,70 ಮನೆಗಳ ನಿರ್ಮಾಣ ಪೂರ್ಣಗೊಂಡಿವೆ. ಈ ಮೂರೂ ಇಲಾಖೆಗಳಲ್ಲೂ ಶೇ 100 ಮನೆಗಳು ಪೂರ್ಣಗೊಂಡಿವೆ.