HEALTH TIPS

ಬಿಗಡಾಯಿಸಿದ ಸಂಬಂಧ ಸುಧಾರಣೆಗೆ 8 ಸೂತ್ರ

        ನವದೆಹಲಿ: ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಎಂಟು ಅಂಶಗಳಿರುವ ಸಲಹೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮುಂದಿಟ್ಟಿದ್ದಾರೆ.

       ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ನಿರ್ವಹಣೆ ಕುರಿತಂತೆ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಕುರಿತಂತೆ ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸಬೇಕು ಎಂಬುದು ಇದರಲ್ಲಿ ಸೇರಿದೆ.

      ಭಾರತ-ಚೀನಾ ಸಂಬಂಧ ಕುರಿತಂತೆ ಆನ್‌ಲೈನ್‌ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್ ಅವರು, ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ನಡೆದ ಘಟನೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಗಡಿರೇಖೆಯಲ್ಲಿ ಬದಲಾವಣೆ ತರುವ ಯಾವುದೇ ಪ್ರಯತ್ನವೂ ಒಪ್ಪಿತವಲ್ಲ ಎಂದು ಭಾರತದ ನಿಲುವನ್ನು ಅವರು ಸ್ಪಷ್ಟಪಡಿಸಿದರು.

       ಗಡಿಯಲ್ಲಿ ಇರುವ ಈಗಿನ ಸ್ಥಿತಿ ಕಡೆಗಣಿಸಬಹುದು ಹಾಗೂ ಜನರ ಬದುಕಿಗೂ ಧಕ್ಕೆಯಾಗದು ಎಂಬ ನಿಲುವು ವಾಸ್ತವವಾಗಿ ಅಷ್ಟು ಸರಳವಾದುದಲ್ಲ. ಪ್ರಸ್ತುತ ಉಭಯ ದೇಶಗಳ ನಡುವಿನ ಬಾಂಧವ್ಯ ಕವಲುದಾರಿಯಲ್ಲಿದೆ. ನಮ್ಮ ಆಯ್ಕೆಗಳು ಈಗ ವಿಶ್ವದ ದೃಷ್ಟಿಯಿಂದ ಆಗಬೇಕಾಗಿದೆ ಎಂದು ಹೇಳಿದರು.

ಈ ದಿನದವರೆಗೂ ಚೀನಾ ಕಡೆಯಿಂದ ಪೂರ್ವ ಲಡಾಖ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೇನೆಯ ನಿಯೋಜನೆ, ನಿಲುವಿನಲ್ಲಿ ಬದಲಾವಣೆ ಕುರಿತಂತೆ ಚೀನಾದಿಂದ ಖಚಿತವಾದ ವಿವರಣೆಯು ಇದುವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries