ಕಾಸರಗೋಡು: ಕಾಸರಗೋಡು ಜಿಲ್ಲೆಯ 8 ಶಿಕ್ಷಣಾಲಯಗಳಿಗೆ ನೂತನ ಕಟ್ಟಡ ನಿರ್ಮಾಣ ನಡೆಯಲಿದ್ದು, ಇದಕ್ಕೆ ಆಡಳಿತಾನುಮತಿ ಲಭಿಸಲಿದೆ.
ಕಾಸರಗೊಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಈ ಕಟ್ಟಡಗಳ ನಿರ್ಮಾಣ ಜರುಗಲಿದೆ. ಅಡ್ಕತ್ತಬೈಲು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ವಿದ್ಯಾಗಿರಿ ಎಸ್.ಎ.ಬಿ.ಎಂ.ಪಿ. ಹಿರಿಯ ಪ್ರಾಥಮಿಕ ಶಾಲೆ, ಕುಂಜತ್ತೂರು ಸರಕಾರಿ ವಿ.ಎಚ್.ಎಸ್.ಎಸ್., ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡನ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಕಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪನಂಗಾಡ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಈ ಮೂಲಕ ನೂತನ ಕಟ್ಟಡ ನಿರ್ಮಾಣಗೊಳ್ಳಲಿವೆ.