ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ಫುಟ್ ಬಾಲ್ ಪಟು ಆರ್ಯಾಶ್ರೀ ಅವರ ಕುಟುಂಬಕ್ಕೆ ನೂತನ ನಿವಾಸ ಜಿಲ್ಲೆಯ ತೆಕ್ಕನ್ ಬಂಗಳಂ ನಲ್ಲಿ ಸಿದ್ಧವಾಗಿದೆ. ಕ್ರೀಡಾಸಚಿವ ಇ.ಪಿ.ಜಯರಾಜನ್ ಅವರು ಆನ್ ಲೈನ್ ಮೂಲಕ ಜ.9ರಂದು ಮಧ್ಯಾಹ್ನ 1 ಗಂಟೆಗೆ ಕೀಲಿಕೈ ಹಸ್ತಾಂತರ ನಡೆಸುವರು.
ಭೂತಾನ್ ನಲ್ಲಿ ನಡೆದಿದ್ದ ಸಾಫ್ ಗೇಮ್ಸ್ ಚಾಂಪಿಯನ್ನರ ತಂಡದಲ್ಲಿ ಪ್ರಮುಖರಾಗಿದ್ದ ಆರ್ಯಾಶ್ರೀ ಅವರಿಗೆ ಮನೆ ನಿರ್ಮಾಣಕ್ಕೆ ಸಚಿವ 10 ಲಕ್ಷ ರೂ. ಒದಗಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿಗೆ ನಿರ್ಮಾಣದ ಹೊಣೆ ನೀಡಲಾಗಿತ್ತು.
ತೆಕ್ಕನ್ ಬಂಗಳಂ ನಲ್ಲಿ ಈ ಸಂಬಂಧ ನಡೆಯುವ ಸಮಾರಂಭದಲ್ಲಿ ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿರುವರು.