ತಿರುವನಂತಪುರ: ಕೋವಿಡ್ ಹಿನ್ನೆಲೆಯಿಂದ ಮುಚ್ಚಲ್ಪಟ್ಟ ರಾಜ್ಯದ ಕಾಲೇಜುಗಳು ನಾಳೆ ಪುನರಾರಂಭಗೊಳ್ಳಲಿದೆ. ಕಾಲೇಜುಗಳು ಶನಿವಾರವೂ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕೆಂದು ಸೂಚಿಸಲಾಗಿದೆ.
50 ಪ್ರತಿಶತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಎಲ್ಲಾ ಅಂತಿಮ ವರ್ಷದ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಕಾಲೇಜುಗಳು ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ಕಾರ್ಯಾಚರಿಸಲಿದೆ.
ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಇಂದು ತೆರೆಯಲಿವೆ. ತರಗತಿಗಳು ಐದು ಗಂಟೆಗಳಿರುತ್ತವೆ. ಅಗತ್ಯವಿದ್ದರೆ ಎರಡು ಪಾಳಿಯಲ್ಲಿ ತರಗತಿಗಳನ್ನು ಆಯೋಜಿಸಲು ಕಾಲೇಜು ಅಧಿಕಾರಿಗಳಿಗೆ ಸೂಚಿಸಲಾಗಿದೆ.