ಕಾಸರಗೋಡು: ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ನಡೆಯುತ್ತಿರುವ ಮಾದರಿ ಚಟುವಟಿಕೆಗಳ ಅಂಗವಾಗಿ ಹೊಸದುರ್ಗ ಜಿಲ್ಲಾ ಕಾರಾಗ್ರಹ ಹರಿತ ಜೈಲು ಆಗಿದೆ. ಸೋಮವಾರ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಘೋಷಣೆ ನಡೆಸಿದರು. ಹರಿತ ವಾರ್ತೆಗಳ ನ್ಯೂಸ್ ಲೆಟರ್ ನ್ನು ಅವರು ಬಿಡುಗಡೆಗೊಳಿಸಿದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿಜ್ಞಾನಿ ಪಿ.ವಿ.ದಿವಾಕರನ್, ಜಿಲ್ಲಾ ಜೈಲು ವರಿಷ್ಠಾಧಿಕಾರಿ ಕೆ.ವೇಣು, ಸಹಾಯಕ ವರಿಷ್ಠಾಧಿಕಾರಿ ಪಿ.ಗೋಪಾಲಕೃಷ್ಣನ್ ಉಪಸ್ಥಿತರಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು.