ಮಂಜೇಶ್ವರ: ಇತಿಹಾಸ ಪ್ರಸಿದ್ಧ ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರವರಿ 11ರಂದು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಭಟ್ ಬಿಡುಗಡೆಗೊಳಿಸಿದರು.
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಜಗದೀಶ ಶೆಟ್ಟಿ ಎಲಿಯಾಣ, ಸದಾಶಿವ ರಾವ್ ಟಿ ಡಿ, ರಾಜಾರಾಮ ರಾವ್ ಮೀಯಪದವು, ನಾರಾಯಣ ನಾೈಕ್ ನಡುಹಿತ್ಲು, ಚಂದ್ರಶೇಖರ ಎಂ.ಐ.ಎಂ. ಮೀಯಪದವು, ಯೋಗೀಶ ರಾವ್ ಚಿಗುರುಪಾದೆ ಉಪಸ್ಥಿತರಿದ್ದರು.