ಕಾಸರಗೋಡು: ನಮ್ಮ ವೈಜ್ಞಾನಿಕ ಮುನ್ನಡೆ ಮತ್ತು ಏಕತೆಯ ಬಲದಿಂದ ಕೋವಿಡ್ ಕಾಲದ ಬೃಹತ್ ಮುಗ್ಗಟ್ಟು ಎದುರಿಸಲು ಸಾಧ್ಯವಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆಯ ವೇಳೆ ಪಥಸಂಚಲನದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಈ ನಿಟ್ಟಿನಲ್ಲಿ ಜಗತ್ತಿಗೆ ಮಾದರಿಯಾಗಿದೆ. ಇದೇ ವೇಳೆ ಸೋಂಕು ಬಾಧೆಯ ತೀವ್ರತೆಯ ನಡುವೆಯೂ ಬಿರುಸಿನ ಮಳೆ ಮತ್ತು ಬಿಸಿಲಿನಲ್ಲಿ ಮೈಮುರಿದು ದುಡಿದ ನಮ್ಮ ಅನ್ನದಾತರನ್ನು ಮರೆಯಕೂಡದು. ಗಣರಾಜ್ಯೋತ್ಸವ ಆಚರಣೆಯು ದೇಶದ ಕೃಷಿಕರ ಬಗೆಗೆ ಗೌರವ ಸೂಚಿಸುವ ದಿನವೂ ಆಗಿದೆ ಎಂದವರು ನುಡಿದರು.
ಒಂದು ವರ್ಷ ಕಾಲ ಕಾಡಿರುವ ಕೋವಿಡ್ ಮಹಾಮಾರಿಯು ಬೆದರಿಕೆಯ ನಡುವೆಯೂ ಕೆಲವು ವಿನೂತನ ನಿರೀಕ್ಷೆಗಳನ್ನೂ ಹಂಚುವ ಮೂಲಕ 2021ರ ಮುಂಜಾನೆ ಮೂಡಿಬಂದಿದೆ. ಮೂಢನಂಬಿಕೆ, ತಪ್ಪು ನಿಲುವು ಗಳನ್ನು ತೊಡೆದು ಹಾಕಿ ವಿಜ್ಞಾನ ಮತ್ತು ವಿಜ್ಞಾನಿಗಳು ಈ ಮುಗ್ಗಟ್ಟಿಗೆ ಪರಿಹಾರ ಪತ್ತೆಮಾಡುರುವುದನ್ನು ನಾವು ಕಂಡಿದ್ದೇವೆ. ತೀವ್ರ ವೈಜ್ಞಾನಿಕ ಪರಿಶ್ರಮದ ಪರಿಣಾಮ ಕೋವಿಡ್ ವಿರುದ್ಧ ಲಸಿಕೆ ನಮ್ಮ ಕೈಸೇರಿದೆ. ಕೋವಿಡ್ ಪರಿಣಾಮ ಜಗತ್ತಿನಾದ್ಯಂತ ಮರಣ ಹೊಮದಿರುವ ಮಂದಿಗೆ ಶ್ರದ್ದಾಂಜಲಿ ಅರ್ಪಿಸುವ ಜೊತೆಗೆ ವೈಜ್ಞಾನಿಕ ಸಾಧನೆಗೆ ದುಡಿದ ವಿಜ್ಞಾನಿಗಳ, ಆರೋಗ್ಯ ಕಾರ್ಯಕರ್ತರಿಗೆ, ಬೆಂಬಲ ನೀಡಿದ ಆಡಳಿತಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ಸಚಿವ ತಿಳಿಸಿದರು.
ಭಿನ್ನತೆಗಳನ್ನು ಮರೆತು ಒಂದಾಗದೇ ಮುಗ್ಗಟ್ಟುಗಳನ್ನು ಎದುರಿಸುವುದು ಕಷ್ಟಸಾಧ್ಯ ಎಂದು ತಿಳಿಸುವ ಕಾಲಘಟ್ಟ ಇದಾಗಿದೆ. ರಾಷ್ಟ್ರೀಯ ಭಾವೈಕ್ಯವನ್ನು ಪೂರ್ಣರೂಪದಲ್ಲಿ ಒಳಗೊಂಡು ಸಂವಿಧಾನದ ಮೌಲ್ಯವನ್ನು ಕಾಯ್ದುಕೊಂಡು ಗಣರಾಜ್ಯೋತ್ಸವವನ್ನು ನಾವು ಕೊಂಡಾಡಬೇಕು ಎಂದವರು ಆಗ್ರಹಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ವಂದನೆ ಸ್ವೀಕರಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ, ಚೆಂಗಳ ಗ್ರಾಮ ಪಂಚಾಯತ್ ಖಾದರ್ ಬದ್ರಿಯಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಡಿ.ವೈಎಸ್.ಪಿ.ಗಳು, ಕಂದಾಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಪೆÇಲೀಸ್, ಸಶಸ್ತ್ರ ಪೆÇಲೀಸ್, ಅಬಕಾರಿ ದಳಗಳ, ಕೆ.ಎ.ಪಿ. 4ನೇ ಬೆಟಾಲಿಯನ್ ಬ್ಯಾಂಡ್ ದಳ ಪಥಸಂಚಲನ ನಡೆಸಿದುವು.