ತಿರುವನಂತಪುರ: ರಾಜ್ಯದಲ್ಲಿ 1,600 ರೂ.ಗಳಾಗಿ ಹೆಚ್ಚಿಸಿರುವ ಕಲ್ಯಾಣ ಪಿಂಚಣಿಯನ್ನು ವಿಶು ಹಬ್ಬದ ಮೊದಲು ಎಲ್ಲರಿಗೂ ವಿತರಿಸಲಾಗುವುದು ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಪ್ರಕಟಿಸಿದ್ದಾರೆ. ಕಳೆದ ಬಜೆಟ್‍ನಲ್ಲಿ ಕಲ್ಯಾಣ ಪಿಂಚಣಿಯನ್ನು 100 ರೂ. ಗಳಾಗಿ ಹೆಚ್ಚಳಗೊಳಿಸಲಾಗಿತ್ತು.
ಹೊಸ ಪಿಂಚಣಿ ಮೊತ್ತವನ್ನು ವಿಶು ಕಿಟ್ ನೊಂದಿಗೆ ವಿಶುವಿಗಿಂತಲೂ ಮೊದಲು ವಿತರಿಸಲು ಸರ್ಕಾರ ಉದ್ದೇಶಿಸಿದೆ. ವಿಶು ಹಬ್ಬದ ಮೊದಲು 10 ಕೆಜಿ ಅಕ್ಕಿ ಪ್ರತಿ ಕೆಜಿಗೆ 15 ರೂ.ಗಳ ದರದಲ್ಲಿ ಎ.ಪಿ.ಎಲ್ ಪಡಿತರ ಚೀಟಿದಾರರಿಗೂ ಲಭ್ಯವಾಗಲಿದೆ ಎಂದು ಥಾಮಸ್ ಐಸಾಕ್ ತಿಳಿಸಿದ್ದಾರೆ. ಎಕೆಜಿ ಕಲಿಕಾ ಸಂಶೋಧನಾ ಕೇಂದ್ರ ನಿನ್ನೆ ಆಯೋಜಿಸಿದ್ದ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು.