ಕಾಸರಗೋಡು: ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯ ಎಂಡೋಸಲ್ಪಾನ್ ಪಿಡಿತ ಪ್ರದೇಶಗಳ ಬಡ್ಸ್ ಶಾಲೆಗಳ ಮಕ್ಕಳಿಗೆ ವಿಶೇಷ ಪೋಷಕ ಆಹಾರ ವಿತರಣೆ ನಡೆಸಲಾಗುವುದು. ಬಡ್ಸ್ ಶಾಲೆಗಳ ಎಲ್ಲ ಮಕ್ಕಳಿಗೂ ಈ ಸ್ಪಷ್ಯಲ್ ನ್ಯೂಟ್ರೀಷಿಯನ್ ಮಿಕ್ಸ್ ನೀಡಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಐ.ಸಿ.ಡಿ.ಎಸ್, ಮತ್ತುಸಿ.ಪಿ.ಸಿ.ಆರ್.ಐ. ಜಂಟಿಯಾಗಿ ಈ ಪೋಷಕ ಆಹಾರ ಸಿದ್ಧಪಡಿಸಲಿವೆ. 6 ತಿಂಗಳ ಅಧ್ಯಯನ ನಡೆಸಿರುವ ಹಿನ್ನೆಲೆಯ್ಲಲಿ ಗಂಭೀರ ಸ್ವರೂಪದಲ್ಲಿ ಪೋಷಕಾಶ ಕೊರತೆಯಿರುವ 6 ತಿಂಗಳಿಂದ ಮೂರು ವರ್ಷ ವರೆಗಿನ ವಯೋಮಾನದ ಮಕ್ಕಳಿಗೆ ಇದು ವಿತರಿಸಲಾಗುವುದು. ಪ್ರಾಯಕ್ಕೆ ಅನುಸಾರ ವಿವಿಧ ಅಳತೆಗಳಲ್ಲಿ ಈ ಆಹಾರ ಪೂರೈಕೆಗೊಳ್ಳಲಿದೆ. ಪಂಚಾಯತ್ ಪ್ಲಾನ್ ಫಂಡ್ ಬಳಸಿ ಈ ಆಹಾರ ಸಿದ್ಧತೆ ಮತ್ತು ವಿತರಣೆಯ ಹೊಣೆ ಕುಟುಂಬಶ್ರೀಗೆ ನೀಡಲಾಗಿದೆ.
ಸಂಪುಷ್ಟ ಕೇರಳಂ ಯೋಜನೆಯ ಅಂಗವಾಗಿ ಜಾರಿಗೊಳಿಸುವ ಪೆÇೀಷಕತೋಟ ವನ್ನು ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಆರಮಭಿಸಲಾಗುವುದು. ಮಾದರಿ ಪೆÇೀಷಕ ತೋಟವನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೂ ಆರಂಭಿಸಲಾಗುವುದು.
ಸಭೆಯಲ್ಲಿ ಹೆಚ್ಚುವರಿ ದಂಡನಧಿಕಾರಿ ಎನ್.ದೇವಿದಾಸ್, ಐ.ಸಿ.ಡಿ.ಎಸ್. ಪೋಗ್ರಾಂ ಅಧಿಕಾರಿ ಕವಿತಾರಾಣಿ ರಂಜಿತ್, ಸಿ.ಡಿ.ಪಿ.ಒ. ಷಿನ್ಸಿ ಐಸಕ್, ಜಿಲ್ಲಾ ವೈದ್ಯಾಧಿಕಾರಿ ಅವರ ಪ್ರತಿನಿಧಿ ಡಾ.ಮುರಳಿ ನಲ್ಲೂರಾಯ ಎ., ಸಿ.ಪಿ.ಸಿ.ಆರ್.ಐ. ಪ್ರತಿನಿಧಿ ಡಾ.ನಿಲಾಫರ್ ಇಲಿಯಾಸ್ಕುಟ್ಟಿ, ಸೂಪರ್ ವೈಸರ್, ಮಿನಿಸ್ಟೇರಿಯಲ್, ಜಿಲ್ಲಾ ಪಂಚಾಯತ್ ಪ್ರತಿನಿಧಿ, ಪ್ಲಾನಿಂಗ್ ಡಿಪಾರ್ಟ್ ಮೆಂಟ್, ಕುಟುಂಬಶ್ರೀ ಡಿ.ಎಂ.ಒ., ಎನ್.ಎನ್. ವಿಭಾಗ ಪ್ರತಿನಿಧಿಗಳು ಉಪಸ್ಥಿತರಿದ್ದರು.