ತಿರುವನಂತಪುರ: ಇ-ಪೋಸ್ ಯಂತ್ರ ಸ್ಥಗಿತಗೊಂಡಿದ್ದರಿಂದ ರಾಜ್ಯವ್ಯಾಪಕವಾಗಿ ಬುಧವಾರ ಪಡಿತರ ವಿತರಣೆ ಸ್ಥಗಿತಗೊಂಡಿತು. ನೆಟ್‍ವರ್ಕ್ ಸಮಸ್ಯೆಯಿಂದಾಗಿ ಬೆಳಿಗ್ಗೆ 9 ರಿಂದ ಪಡಿತರ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು. ಇ-ಪೆÇೀಸ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದ ಪಡಿತರ ಅಂಗಡಿಗಳಲ್ಲಿ, ಕಾರ್ಡ್‍ದಾರರು ತಮ್ಮ ಬೆರಳಚ್ಚುಗಳು ಕಾಣಿಸಿಕೊಳ್ಳಲು ಮತ್ತು ಒಟಿಪಿ ಬರಲು ಬಹಳ ಸಮಯ ಕಾಯಬೇಕಾಯಿತು.
ಪ್ರಸ್ತುತ ತಿಂಗಳ ಕೊನೆಯ ದಿನಗಳಾಗಿರುವುದರಿಂದ ಪಡಿತರ ಅಂಗಡಿಗಳಲ್ಲಿ ಆಹಾರ ಕಿಟ್‍ಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಬಂದು ತಲಪುತ್ತಿದ್ದಾರೆ. ಶೀಘ್ರದಲ್ಲೇ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.
ಇ-ಪೆÇೀಸ್ ಯಂತ್ರದ ಅಸಮರ್ಪಕ ಕಾರ್ಯವನ್ನು ಸರಿಪಡಿಸಲು ಸರ್ವರ್ ಅನ್ನು ಬದಲಾಯಿಸುವುದು ಸೇರಿದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪಡಿತರ ವ್ಯಾಪಾರಿಗಳು ಪದೇ ಪದೇ ವಿನಂತಿಸುತ್ತಿದ್ದಾರೆ. ಇಂತಹ ಸಮಸ್ಯೆ ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗುತ್ತಿದ್ದು ಗ್ರಾಹಕರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ.