ಕಾಸರಗೋಡು: ಕಾಸರಗೋಡು ಜಿಲ್ಲಾಡಳಿತೆ ಮತ್ತು ಮಹಿಳಾ ಸಂರಕ್ಷಣೆ ಕಚೇರಿಯ ವಿಧವೆಯರ ಸಂರಕ್ಷಣೆ ಯೋಜನೆಯಾಗಿರುವ "ಕೂಟ್" ಮೂಲಕ ವಿಧವೆಯರ ಪುನರ್ ವಿವಾಹಕ್ಕೆ ಪೆÇ್ರೀತ್ಸಾಹ ಒದಗಿಸಲಾಗುವುದು. ಜಿಲ್ಲೆಯ ವಿಧವೆಯರನ್ನು7 ವಿವಾಹವಾಗಲು ಸಿದ್ಧರಿರುವ ಪುರುಷರು ಈ ಸಂಬಂಧ ಅರ್ಜಿಯನ್ನು ಜ.29ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬಹುದು. 6 ತಿಂಗಳ ಅವಧಿಯಲ್ಲಿ ಚಿತ್ರಿಸಿರುವ ಪಾಸ್ ಪೆÇೀರ್ಟ್ ಗಾತ್ರದ ಭಾವಚಿತ್ರ, ಯಾವುದೇ ಅಪರಾಧ ಪ್ರಕರಣಗ ಹಿನ್ನೆಲೆ ಹೊಂದಿಲ್ಲ ಎಂದೂ, ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಖಚಿತತೆ ಮೂಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಪೆÇಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಯ ದೃಡೀಕರಣಪತ್ರ , ಗಂಭೀರ ಸ್ವರೂಪದ ರೋಗ ಹೊಂದಿಲ್ಲ ಎಂಬ ಬಗ್ಗೆ ಸರಕಾರಿ ವೈದ್ಯಾಧಿಕಾರಿ ಅವರಿಂದ ಸರ್ಟಿಫಿಕೆಟ್, ವಯೋಮಾನ ತಿಳಿಸುವ ದಖಲೆ ಪತ್ರ, ಅರ್ಜಿದಾರನ ಸ್ವಭಾವ, ಕುಟುಂಬ ನಡೆಸಲು ಅಗತ್ಯವಿರುವ ಆರ್ಥಿಕತೆಯ ಕುರಿತು ವಾರ್ಡ್ ಸದಸ್ಯರ ದೃಡೀಕರಣ ಪತ್ರ ಅರ್ಜಿಯೊಂದಿಗೆ ಸಲ್ಲಿಸಬೇಕು. ವಿಮೆನ್ ಪೆÇ್ರಟೆಕ್ಷನ್ ಆಫೀಸರ್, ವನಿತಾ ಶಿಶು ವಿಕಸನ ಡಿಪಾರ್ಟ್ ಮೆಂಟ್, ಕಾಸರಗೋಡು ಸಿವಿಲ್ ಸ್ಟೇಷನ್, ವಿದ್ಯಾನಗರ, ಪಿ.ಒ.-671123 ಎಂಬ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು. ದೂರವಾಣಿ ನಂಬ್ರ: 04994-255266, 256266.