ನವದೆಹಲಿ: ಬಿಜೆಪಿ ಪಕ್ಷದ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಸುಬ್ರಮಣಿಯನ್ ಸ್ವಾಮಿ ಇದೀಗ ಭಾರತದಲ್ಲಿ ಆಸ್ಟ್ರಾಜೆನಕಾ ತುರ್ತು ಬಳಕೆಗೆ ಅನುಮತಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಆಸ್ಟ್ರಾಜೆನಿಕಾ ಲಸಿಕೆಯನ್ನು ಭಾರತದಲ್ಲಿ ಬಳಸಲು ಅನುಮತಿ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆಕ್ಸ್ ಫರ್ಡ್-ಆಸ್ಟ್ರಾಜೆನಿಕಾ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿಲ್ಲ ಹೀಗಿದ್ದರೂ ಭಾರತದಲ್ಲಿ ಇದನ್ನು ಬಳಸಲು ಡಿಸಿಜಿಐ ಅನುಮತಿ ನೀಡಿದ್ದು ಈ ಲಸಿಕೆ ಪಡೆಯಲು ಭಾರತೀಯರೇನು ಹಂದಿಗಳ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಭಾರತ್ ಬಯೋಟೆಕ್‍ನ ಲಸಿಕೆಯಾದ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ನಿಧಾನವಾಗಿ ಅನುಮತಿ ನೀಡಿರುವುದಕ್ಕೆ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.