HEALTH TIPS

ನಿಸ್ವಾರ್ಥತೆಯಿಂದ ಕೂಡಿದ ಆದರ್ಶವಾದ ಚಿಂತನೆ ಅಗತ್ಯ - ಪ್ರಶಾಂತ್ ಉಬ್ರಂಗಳ- ಎನ್‍ಟಿಯು ಕುಂಬಳೆ ಉಪ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

 

       ಬದಿಯಡ್ಕ: ಅಧ್ಯಾಪಕರು ಆದರ್ಶಗಳ ಸಚೇತನ ಉದಾಹರಣೆಗಳಾಗಬೇಕು. ಪರಿಶುದ್ಧತೆ, ನಿಸ್ವಾರ್ಥತೆಯಿಂದ ಕೂಡಿದ ಆದರ್ಶವಾದ ಚಿಂತನೆ ನಡವಳಿಕೆಗಳನ್ನು ಸಮಾಜವು ಅಧ್ಯಾಪಕರಿಂದ ಅಪೇಕ್ಷಿಸುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಪ್ರಶಾಂತ್ ಉಬ್ರಂಗಳ ಅಭಿಪ್ರಾಯಪಟ್ಟರು. 

            ನಿವೃತ ಚಿತ್ರ ಕಲಾ ಅಧ್ಯಾಪಕ, ಸಂಘದ ಹಿರಿಯ ಕಾರ್ಯಕರ್ತ ಉಬ್ರಂಗಳ ಪುರುಷೋತ್ತಮ ಪ್ರಸಾದ್ ಇವರ ನಿವಾಸದಲ್ಲಿ ಮಂಗಳವಾರ ಜರಗಿದ ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸ್ವಾಮೀ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಯುುವ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

        ವಿವೇಕಾನಂದರ ಆದರ್ಶ ಜೀವನವನ್ನು ಯಾವರೀತಿ ಅಧ್ಯಾಪಕರು ಹಾಗೂ ಸಮಾಜವು ಮೈಗೂಡಿಸಿಕೊಳ್ಳಬೇಕೆಂಬ ವಿಚಾರವನ್ನು ಮುಂದಿಟ್ಟರು. ಸಂಘಟಿತ ಪ್ರಯತ್ನದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತಂದು ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಾಧ್ಯವಿದೆ ಎಂದರು.

      ದೇಶೀಯ ಅಧ್ಯಾಪಕ ಪರಿಷತ್ ರಾಜ್ಯ ಉತ್ತರ ವಲಯ ಕಾರ್ಯದರ್ಶಿ ಪ್ರಭಾಕರನ್ ನಾಯರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್‍ಟಿಯು ಜಿಲ್ಲಾ ಕಾರ್ಯದರ್ಶಿ  ಅಜಿತ್ ಕುಮಾರ್, ಕುಂಬಳೆ ಉಪ ಜಿಲ್ಲಾ ಸಮಿತಿ ಸದಸ್ಯ ರಾಜೇಶ್ ಉಬ್ರಂಗಳ ಶುಭ ಹಾರೈಸಿದರು. ಕುಂಬಳೆ  ಉಪಜಿಲ್ಲಾ ಕಾರ್ಯದರ್ಶಿ ಶರತ್ ಕುಮಾರ್ ನಿರೂಪಿಸಿದರು. ಎನ್‍ಟಿಯು ಕುಂಬಳೆ ಉಪ ಜಿಲ್ಲಾ ಅಧ್ಯಕ್ಷ ರಂಜಿತ್ ಸ್ವಾಗತಿಸಿ. ಕುಂಬಳೆ ಉಪಜಿಲ್ಲಾ ಸಮಿತಿ ಸದಸ್ಯ ಪುರುಷೋತ್ತಮ ಕುಲಾಲ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries