ಮಂಜೇಶ್ವರ: ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಉತ್ತರಪ್ರದೇಶ ನಿವಾಸಿಯಾಗಿರುವ ಯುವಕನೊಬ್ಬನ ಮೃತದೇಹ ಖಾಸಗಿ ವ್ಯಕ್ತಿಯೊಬ್ಬರ ಕೆರೆಯಲ್ಲಿ ಪತ್ತೆಯಾಗಿದೆ.
ಉತ್ತರಪ್ರದೇಶ ನಿವಾಸಿ ಅನಿಲ್ ನ ಮೃತದೇಹ ಕುಂಜತ್ತೂರು ಅಂಬಿತ್ತಡಿ ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಹಿತ್ಲಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ವಿದ್ಯುತ್ ಕಂಬ ನಿರ್ಮಾಣದ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿರುವ ಅನಿಲ್ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದನೆಂದು ಹೇಳಲಾಗಿದೆ.
ಪರಿಸರವಾಸಿಗಳಿಗೆ ದುರ್ನಾತ ಬರುತ್ತಿರುವ ಹಿನ್ನೆಲೆಯಲ್ಲಿ ಕೆರೆಯ ಬಳಿ ಹೋದಾಗ ಮೃತದೇಹ ಪತ್ತೆಯಾಗಿದೆ. ತಲೆಗೆ ಬಲವಾದ ಗಾಯವಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಲೆಗೆ ಹೊಡೆದು ಯಾರಾದರೂ ಕೆರೆಗೆ ಹಾಕಿರಬಹುದಾ ಶಂಕೆ ಕೂಡಾ ವ್ಯಕ್ತವಾಗಿದೆ. ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ ಇಂಕ್ವೆಸ್ಟ್ ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಕರ್ನಾಟಕ ಗಡಿ ಭಾಗದಲ್ಲಿರುವ ಈತ ಯಾವ ಕಾರಣಕ್ಕೆ ಅಂಬಿತ್ತಡಿ ಭಾಗಕ್ಕೆ ಬಂದಿದ್ದಾನೆ? ಕೆರೆಗೆ ಹೇಗೆ ಬಿದ್ದಿದ್ದಾನೆ? ತಲೆಗೆ ಬಲವಾದ ಏಟು ಬೀಳಲು ಕಾರಣವೇನು? ಇದೊಂದು ಕೊಲೆಯಾಗಿರಬಹುದೇ ಮೊದಲಾದ ಪ್ರಶ್ನೆಗಳು ನಿಗೂಢವಾಗಿಯೇ ಇದೆ. ಪೆÇಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.