ಕಾಸರಗೋಡು: ನೀವು ಉತ್ತಮ ತಳಿಯ ಹಸು ಖರೀದಿಸುವ ಯೋಚನೆಯಲ್ಲಿದ್ದೀರಾ?..ಹಾಗಾದರೆ ಕಾಸರಗೋಡು ಜಿಲ್ಲೆಯ ಚಿತ್ತಾರಿ ಹಾಲು ಉತ್ಪಾದಕ ಸಂಘದ ಕಿಡಾರಿ ಪಾರ್ಕ್ (ಕರುಗಳ ಉದ್ಯಾನ) ಗೆ ಭೇಟಿ ನೀಡಿ ನೀಡಬಹುದು.
ಕಾಸರಗೋಡು ಜಿಲ್ಲೆಯ ಹಾಲು ಉತ್ಪಾದನೆ ವಲಯಕ್ಕೆ ಹೊಸ ಹುರುಪನ್ನು ನೀಡುವ ನಿಟ್ಟಿನಲ್ಲಿ ಚಿತ್ತಾರಿ ಹಾಲು ಉತ್ಪಾದಕರ ಸಂಘದ ಸ್ವಾಮ್ಯದಲ್ಲಿರುವ ಕಿಡಾರಿ ಪಾರ್ಕ್ ಅಭಿವೃದ್ಧಿ ಹೊಂದಿದೆ. ಕೃಷಿಕರು, ಹಾಲು ಉತ್ಪಾದಕರು ಮಾತ್ರವಲ್ಲ ಈ ವಲಯಕ್ಕೆ ನೂತನವಾಗಿ ಪಾದಾರ್ಪಣೆ ನಡೆಸಲು ಆಸಕ್ತರಾದವರಿಗೆ ಮಧ್ಯವರ್ತಿಗಳಿಲ್ಲದೆ ಉತ್ತಮ ಗುಣಮಟ್ಟದ ಹಸುಗಳನ್ನು ಖರೀದಿಸಲು ಈ ಸಂಸ್ಥೆ ಪೂರಕವಾಗಿದೆ. 2018-19ರಲ್ಲಿ ರಾಜ್ಯ ಹಾಲು ಅಭಿವೃದ್ಧಿ ಇಲಾಖೆ ರಾಜ್ಯದಲ್ಲಿ ಮಂಜೂರು ಮಾಡಿರುವ ಎರಡು ಪಾರ್ಕ್ ಗಳಲ್ಲಿ ಈ ಕರುಗಳ ಉದ್ಯಾನವೂ ಒಂದು.
7 ರಿಂದ 15 ತಿಂಗಳ ವಯೋಮಾನದ ಕರುಗಳನ್ನು ಖರೀದಿಸಿ ಇಲ್ಲಿ ಬೆಳೆಸಲಾಗುತ್ತದೆ. ಬೆಳೆದು ಹಸುವಾಗಿ ಕರುವಿಗೆ ಜನನ ನೀಡಿದ ಮೇಲೆ ಜತೆಯಾಗಿ (ಹಸು ಮತ್ತು ಕರು)ಇವನ್ನು ಕೃಷಿಕರಿಗೆ ಮಾರಾಟ ನಡೆಸುವುದು ಈ ಯೋಜನೆಯ ಉದ್ದೇಶ. ಡಿಸೆಂಬರ್ ತಿಂಗಳಲ್ಲಿ ಚಟುವಟಿಕೆ ಆರಮಭಿಸಿರುವ ಈ ಉದ್ಯಾನದಲ್ಲಿ ಈಗಾಗಲೇ 66 ಹಸುಗಳು ಮಾರಾಟಗೊಂಡಿವೆ. 21 ಹಸುಗಳು ಮಾರಾಟಕ್ಕೆ ಸಿದ್ಧವಾಗಿವೆ.
ಉತ್ತಮ ರೋಗ ಪ್ರತಿರೋಧ ಸಾಮರ್ರ್ಥಯ ಹೊಂದಿರುವ, ಹಾಲು ಉತ್ಪಾದನೆ ಸಾಮಥ್ರ್ಯ ಹೊಂದಿರುವ ಹಸುಗಳನ್ನು ಇಲ್ಲಿ ಸಾಕಣೆ ನಡೆಸಲಾಗುತ್ತದೆ. ಈ ಕಾರಣದಿಂದಲೇ ಹಾಲು ಉತ್ಪಾದಕರು, ಹಾಲು ಉತ್ಪಾದನೆ ಸಂಘಗಳು, ಖಾಸಗಿ ವ್ಯಕ್ತಿಗಳು ವಿಶ್ವಾಸವಿರಿಸಿ ಇಲ್ಲಿನ ಹಸುಗಳನ್ನು ಖರೀದಿಸಬಹುದಾಗಿದೆ. ಜಿಲ್ಲೆಯ ಅನೇಕ ಮಂದಿ ಹಾಲು ಉತ್ಪಾದಕರಿಗೆ ಮತ್ತು ಚೀಮೇನಿ ಮುಕ್ತ ಜೈಲಿಗೆ ಇಲ್ಲಿನ ಹಸುಗಳು ಮಾರಾಠಗೊಂಡಿವೆ. ತಮಿಳುನಾಡಿನ ಕೃಷ್ಣಗಿರಿ, ಕರ್ನಾಟಕದ ಚಿಂತಾಮಣಿ ಪ್ರದೇಶಗಳಿಂದ ಮೊದಲ ಹಂತದಲ್ಲಿ ಈ ಉದ್ಯಾನಕ್ಕೆ ಕರುಗಳನ್ನು ಖರೀದಿಸಿ ತರಲಾಗಿತ್ತು.
ಬೆಳೆದ ಹಸುವೊಂದಕ್ಕೆ 45 ಸಾವಿರ ರೂ.ನಿಂದ 75 ಸಾವಿರ ರೂ. ಬೆಲೆಯಿದೆ. ಹಾಲು ಉತ್ಪಾದನೆಯ ಸಾಮಥ್ರ್ಯ, ರೋಗ ಪ್ರತಿರೋಧ ಸಾಮಥ್ರ್ಯಿತ್ಯಾದಿಗಳ ಹಿನ್ನೆಲೆಯಲ್ಲಿ ದರ ನಿಗದಿಯಾಗುತ್ತದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ಆಸಕ್ತರು ಇಲ್ಲಿ ಹಸುಗಳನ್ನು ಖರೀದಿಸಬಹುದು. ಹಸುಗಳಿಗೆ ವಿಮೆ ಸೌಲಭ್ಯ ಒದಗಿಸಿ ಮಾರಾಟ ನಡೆಸಲಾಗುತ್ತದೆ. ಖರಿದಿಯ ಅವಧಿಯಲ್ಲಿ ಹಸುಗಳ ಹೆಲ್ತ್ ಆಂಡ್ ವಾಕ್ಸಿನೇಷನ್ ಸರ್ಟಿಫಿಕೆಟ್ ಖಚಿತಪಡಿಸಲಾಗುವುದು.
ಹಿಂದೆ ಕಾಸರಗೊಡು ಜಿಲ್ಲೆಯ ಕೃಷಿಕರು ಹಸುಗಳನ್ನು ತಮಿಳುನಾಡು ಸಹಿತ ರಾಜ್ಯಗಳಿಂದ ಖರೀಸುವ ವೇಳೆ ಮಧ್ಯವರ್ತಿಗಳ ಮೂಳಕ ಶೋಷಣೆಗೊಳಗಾಗುತ್ತಿದ್ದ ಕ್ರಮಗಳು ನಡೆಯುತ್ತಿದ್ದುವು. ಈ ಕರುಗಳ ಉದ್ಯಾನ ಸ್ಥಾಪನೆಯ ನಂತರ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.