ಕಾಸರಗೋಡು: ಸ್ವಾಮಿ ವಿವೇಕಾನಂದ ಅವರು ಯುವ ಸಮೂಹದ ಪ್ರೇರಣಾ ಶಕ್ತಿಯಾಗಿರುವುದಾಗಿ ಬೆಂಗಳೂರು ಶ್ರೀವಾಸ ವಿಶ್ವ ವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಡಾ. ಶ್ರೀನಿಧಿ ಕೆ. ಪಾರ್ಥಸಾರಥಿ ತಿಳಿಸಿದ್ದಾರೆ.
ಅವರು ಪೆರಿಯದ ಕೇಂದ್ರೀಯ ವಿಶ್ವ ವಿದ್ಯಾಲಯ ಕೇರಳ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದ್ದ 158ನೇ ವರ್ಷದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಇ.ಶ್ರೀಧರನ್ ಜೀವನ ನೈಪುಣ್ಯ ಅಧ್ಯಯನ ಕೇಂದ್ರ ಆಯೋಜಿಸಿರುವ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದರು.
ವಿಶ್ವ ವಿದ್ಯಾಲಯದ ಉಪ ಕುಲಪತಿ ಪ್ರೊ..ಎಚ್. ವೆಂಕಟೇಶ್ವರಲು ಸಮಾರಂಭ ಉದ್ಘಾಟಿಸಿದರು. ರಿಜಿಸ್ಟ್ರಾರ್ ಎ. ಮುರಳೀಧರನ್ ನಂಬ್ಯಾರ್, ಕೇಂದ್ರ ನಿರ್ದೇಶಕ ಡಾ. ಮಹಮ್ಮದುಣ್ಣಿ ಎಲಿಯಾಸ್ ಮುಸ್ತಫಾ, ಡಾ. ಸೀಮಾ ಚಂದ್ರನ್, ಡಾ. ಮೇರಿವಿನಿತಾ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು.