ಕಾಸರಗೋಡು: ಡಿವೈಎಸ್‍ಪಿ, ಹರೀಶ್ಚಂದ್ರ ನಾಯ್ಕ್ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಪಂಚಾಯಿತಿ ಕರಿಂಬಿಲ ನಿವಾಸಿಯಾಗಿರುವ ಇವರು, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿ, ಬಳಿಕ ಕೇರಳದಲ್ಲಿ ಮರಾಟಿ ಮೀಸಲಾತಿಯನ್ವಯ ಕೇರಳ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಎಸ್.ಐ, ಸರ್ಕಲ್ ಇನ್ಸ್‍ಪೆಕ್ಟರ್ ಹಾಗೂ ಡಿವೈಎಸ್‍ಪಿಯಾಗಿ ಬಡ್ತಿ ಪಡೆದಿರುವ ಇವರು, ಪ್ರಸಕ್ತ ಕಾಸರಗೋಡು ಕ್ರೈಂಬ್ರಾಂಚ್ ಡಿವೈಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.