ಕಾಸರಗೋಡು: ಕಾನತ್ತೂರಿನಲ್ಲಿ ಕೌಟುಂಬಿಕ ಕಲಹವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದ ಘಟನೆ ಶನಿವಾರ ನಡೆದಿದೆ. ವಡಕ್ಕೇಕರ ಮೂಲದ ವಿಜಯನ್ ಎಂವರು ತನ್ನ ಪತ್ನಿ ಬಾಬಿ (35) ಅವರನ್ನು ಗುಂಡಿಕ್ಕಿ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆಗ್ಯೆದನು.
ಈ ಘಟನೆ ಕಾನತ್ತೂರಿನ ಉತ್ತರ ಭಾಗದಲ್ಲಿ ನಡೆದಿದೆ. ಬಾಬಿಗೆ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿರುವುದು ಕಂಡುಬಂದಿದೆ. ಲಿವಿಂಗ್ ರೂಮಿನಲ್ಲಿ ಮೃತ ದೇಹ ಪತ್ತೆಯಾಗಿದೆ. ವಿಜಯನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಜಯನ್ ಅವರ ಮನೆಯ ಸಮೀಪ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಯಾರಾದರೂ ಬಾಬಿಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆಯೇ ಎಂಬ ಬಗ್ಗೆ ದಂಪತಿಗಳ ನಡುವೆ ವಿವಾದ ಉಂಟಾಗಿದೆ ಎನ್ನಲಾಗಿದ್ದು, ಇದು ಕೊಲೆಗೆ ಕಾರಣವಾಗಿರಬಹುದು ಎಂದು ವರದಿಯಾಗಿದೆ. ಆದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.