ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪದಗ್ರಹಣ ನಡೆಸಿರುವ ಜನಪ್ರತಿನಿಧಿಗಳಿಗೆ ಜ.13ರಿಂದ 16 ವರೆಗೆ ಕಿಲಾ ಸಂಸ್ಥೆಯ ನೇತೃತ್ವದಲ್ಲಿ ತರಬೇತಿ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಆನ್ ಲೈನ್ ತಾಂತ್ರಜ್ಞಾನ ಬಳಸಿ ಆಯಾ ಸಂಸ್ಥೇಗಳಲ್ಲೇ ಜನಪ್ರತಿನಿಧಿಗಳು ಭಾಗವಹಿಸುವಂತೆ ತರಬೇತಿ ನೀಡಲಾಗುವುದು. ಗ್ರಾಮ ಪಂಚಾಯತ್ ಗಳಿಗೆ, ನಗರಸಭೆಗಳೀಗೆ , ಬ್ಲೋಕ್ ಪಂಚಾಯತ್ ಗಳಿಗೆ ಪ್ರತ್ಯೇಕಸಮಯ ನಿಗದಿ ಪಡಿಸಿ ಕೇಂದ್ರೀಕೃಏತ ವೀಡಿಯೋ ಸೆಷನ್ ಗಳನ್ನು ಪ್ರಸ್ತುತಪಡಿಸಿ ತರಬೇತಿ ನೀಡಲಾಗುವುದು. ಈ ಸಮಯದಲ್ಲಿ ಪ್ರತಿ ಸ್ಥಳೀಯಾಡಳಿತೆ ಸಂಸ್ಥೆಗಳಲ್ಲಿ ಕಿಲಾ ಸಂಸ್ಥೆಯ ಸಂಪನ್ಮೂಲ ತಂಡ ಇರುವುದು. ಲೈವ್ ಸ್ಟ್ರೀಂ ನಡೆಸುವ ವೀಡಿಯೋ ಸೆಷನ್ ಗಳ ನಂತರ ಪ್ರಶ್ನೋತ್ತರ, ಸಂವಾದ ಇತ್ಯಾದಿಗಳೂ ಇರುವುವು.
ತರಬೇತಿಯಲ್ಲಿ ಸಾರ್ವಜನಿಕ ಆಡಳಿತೆ, ಯೋಜನೆ, ಆರ್ಥಿಕ ನಿರ್ವಹಣೆ, ಲೋಕೋಪಯೋಗಿ, ಸಮಾಜ ಕಲ್ಯಾಣ ಯೋಜನೆಗಳು, ಸಮಾಜ ನೀತಿ, ಮಹಿಳಾ ಪ್ರಬಲೀಖರಣ, ತ್ಯಾಜ್ಯ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ತರಗತಿಗಳು ಇರುವುವು. ಪ್ರಾಥಮಿಕ ಹಂತವಾಗಿರುವ ಹಿನ್ನೆಲೆಯಲ್ಲಿ ಇವುಗಳ ಮೂಲಭೂತ ವಿಚಾರಗಳನ್ನು ತಿಳಿಸಲಾಗುವುದು. ನಂತರ ಪ್ರತಿ ವಿಷಯದಲ್ಲೂ ಸಮಗ್ರ ತರಬೇತಿಗಳು ಇರುವುವು.
ತರಬೇತಿಗೆ ಅಗತ್ಯವಿರುವ 8 ಕೈಹೊತ್ತಗೆಗಳು ಅಳವಡಗೊಂಡಿರುವ ಪುಸ್ತಕ ಜೋಳಿಗೆ ನೂತನ ಜನಪ್ರತಿನಿಧಿಗಳಿಗೆ ಕಿಲಾ ಸಂಸ್ಥೆ ಒದಗಿಸಿದೆ. ತರಬೇತಿ ವೀಡಿಯೋಗಳೂ, ಪುಸ್ತಕಗಳ ಸಾಫ್ಟ್ ಕಾಪಿ ಆನ್ ಲೈನ್ ನಲ್ಲೂ ಲಭ್ಯವಿದೆ. ಪ್ರಾಥಮಿಕ ಹಂತದ ತರಬೇತಿಗಳು ಪೂರ್ತಿಗೊಳಿಸಿದ ತಕ್ಷಣ 2021-22 ರ ವಾರ್ಷಿಕ ಯೋಜನೆ ಸಿದ್ಧಪಡಿಸಲು, ಬಜೆಟ್ ಸಿದ್ಧಪಡಿಸಲು ತರಬೇತಿ, ನಂತರ ವಿವಿಧ ಸ್ಥಾಯೀ ಸಮಿತಿ ಸದಸ್ಯರಿಗೆ ಸಮಗ್ರ ತರಬೇತಿ, ಮಹಿಳಾ ಜನಪ್ರತಿನಿಧಿಗಳಿಗೆ ಪ್ರತ್ಯೇಕ ತರಬೇತಿ ಆರಮಭಿಸಲಾಗುವುದು. ತದನಂತರ ಪ್ರತ್ಯೇಕ ವಿಷಯಗಳಲ್ಲಿ ಸಮಗ್ರ ತರಬೇತಿಗಳನ್ನು ನಡೆಸಲಾಗುವುದು. ಸಮಗ್ರ ತ್ಯಾಜ್ಯ ನಿರ್ವಹಣೆ, ಜಾಗ ಸಂಬಂಧ ಯೋಜನೆಗಳು, ದುರಂತ ನಿವಾರಣೆ ಯೋಜನೆಗಳು, ಹವಾಮಾನ ಪರಿಸ್ಥಿತಿ ಸಂಬಂಧ ಸ್ಥಳೀಯ ಮಟ್ಟದ ಕ್ರಿಯಾ ಯೋಜನೆಗಳು, ಪರಿಶಿಷ್ಟ ಜಾತಿ-ಪಂಗಡ ಸೌಹಾರ್ದ ಸ್ಥಳಯಾಡಳಿತ ಕೃಷಿ ಪ್ರಧಾನ ವಲಯಗಳು, ಬಾಲ ಸೌಹಾರ್ದ ಸ್ಥಳೀಯಾಡಳಿತ, ವಯೋಜನ ಸೌಹಾರ್ದ ಸ್ಥಲೀಯಾಡಳಿತ, ವಿಶೇಷ ಚೇತನರ ಸೌಹಾರ್ದ ಸ್ಥಳೀಯಾಡಳಿತ, ಸೇವೆಗಳ ಗುಣಮಟ್ಟ ಇತ್ಯಾದಿ ವಿಷಯಗಳಲ್ಲಿ ಈ ತರಬೇತಿ ಜರುಗಲಿದೆ. ಇದರ ನಂತರ ಈ ಎಲ್ಲವೂ ಸಾರ್ವಜನಿಕರಿಗೂ ಲಭ್ಯವಾಗುವ ವ್ಯವಸ್ಥೆಯನ್ನು ಕಿಲಾ ನಡೆಸಲಿದೆ.
ಕೋವಿಡ್ 19 ಅವಧಿಯಲ್ಲಿ ಸಿದ್ಧಪಡಿಸಿರುವeಛಿouಡಿses.ಞiಟಚಿ.ಚಿಛಿ.iಟಿಎಂಬ ಪೆÇೀರ್ಟಲ್ ಮೂಲಕ ನೂರಾರು ಆನ್ ಲೈನ್ ತರಬೇತಿಗಳನ್ನು ನೀಡಿರುವ ಅನುಭವವನ್ನು ಕಿಲಾ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಈ ತರಬೇತಿಯೂ ನಡೆಯಲಿದೆ. ಕನ್ನಡ ಭಾಷೆಯಲ್ಲೂ ತರಬೇತಿ ನೀಡಲಾಗುವುದು. ಕಿಲಾದ "ನವಕೇರಳಕ್ಕಾಗಿ ಗ್ರಾಮ ಪಂಚಾಯತ್ ಗಳು" ಎಂಬ ಕೈಹೊತ್ತಗೆಯನ್ನು ಶೀಘ್ರದಲ್ಲಿ ಕನ್ನಡದಲ್ಲೂ ಪ್ರಕಟಿಸಿ ಜನಪ್ರತಿನಿಧಿಗಳಿಗೆ ನೀಡಲಾಗುವುದು.