ಕಾಸರಗೋಡು: ಕೋವಿಡ್ ಕಾಲಾವಧಿಯಲ್ಲಿ ನಡೆಯುತ್ತಿದ್ದ ಆನ್‍ಲೈನ್ ತರಗತಿ ನಂತರ ಪ್ಲಸ್ ಟು ಸಾಮಾನ್ಯ ತರಗತಿಯನ್ನು ಆರಂಭಿಸಿದ್ದರೂ, ಅಗತ್ಯ ಶಿಕ್ಷಕರ ನೇಮಕಾತಿ ನಡೆಸದಿರುವ ಸರ್ಕಾರದ ಕ್ರಮ ಖಂಡಿಸಿ ಯೂತ್ ಕಾಂಗ್ರೆಸ್ ವತಿಯಿಂದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಯವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರ ಕಾಟಾಚಾರಕ್ಕೆ ಶಾಲೆ ಪುನರಾರಂಭಿಸಿದೆ. ತಾತ್ಕಾಲಿಕ ಶಿಕ್ಷಕರನ್ನು ನೇಮಿಸದೆ ಸರ್ಕಾರ ವಿದ್ಯಾರ್ಥಿಗಳಿಗೆ ವಂಚನೆಯೆಸಗಿದೆ. ಹಲವು ತಿಂಗಳ ನಂತರ ಶಾಲೆ ಪುನರಾರಂಭಗೊಂಡಾಗ ಬಹುತೇಕ ಶಾಲೆಗಳಲ್ಲೂ ಶಿಕ್ಷಕರಿಲ್ಲದೆ ಅಧ್ಯಯನ ನಡೆಸಲಾಗದ ಸ್ಥಿತಿ ಎದುರಾಗಿದೆ. ಹಲವಾರು ಉದ್ಯೋಗಿಗಳನ್ನೊಳಗೊಂಡ ಪಿಎಸ್‍ಸಿ ರ್ಯಾಂಕ್ ಪಟ್ಟಿ ಜಾರಿಯಲ್ಲಿದ್ದರೂ, ಇದರಿಂದ ಶಿಕ್ಷಕರ ನೇಮಿಸಲು ಸರ್ಕಾರ ಮುಂದಾಗದಿರುವುದು ಪ್ರತಿಭಟನಾಕಾರರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತ್ತು. ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮ್ಯಾಥ್ಯೂ ಬದಿಯಡ್ಕ, ರತೀಶ್ ಇರಿಯ, ಸಂತೋಷ್ ಕ್ರಾಸ್ತ, ರಾಹುಲ್ ರಾಮನಗರ್, ಸವಾದ್ ಉಕ್ಕಿನಡ್ಕ, ದೀಪು ಕಲ್ಯೋಟ್, ಉದ್ದೇಶ್ ಚೆರ್ಕಳ, ಗಿಜೀಶ್ ಮುಂಡಕೈ ಉಪಸ್ಥಿತರಿದ್ದರು.